

ಕಳೆದೊಂದು ವಾರದಿಂದ ಸುಶಾಂತ್ ಸಿಂಗ್ ಆತ್ಮಹತ್ಯೆ ಬೆನ್ನಲ್ಲೆ ಒಂದಲ್ಲ ಒಂದು ಕಾರಣಕ್ಕೆ ಸಲ್ಮಾನ್ ಖಾನ್ ಅಭಿಮಾನಿಗಳ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾರೆ. ನೆಪೋಟಿಸಂ ಎದುರಿಗಿಟ್ಟುಕೊಂಡು, ಬಾಲಿವುಡ್ನ ಘಟಾನುಘಟಿಗಳನ್ನು ತರಾಟೆಗೆ ತೆಗೆದುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಅನ್ಫಾಲೋ ಮಾಡುತ್ತಿದ್ದಾರೆ. ಅದೇ ರೀತಿ ಸಲ್ಮಾನ್ ಖಾನ್ಗೂ ಅಂಥದ್ದೇ ಬಿಸಿ ಮುಟ್ಟಿತ್ತು. ಆದರೆ, ಘಟನೆ ಬಗ್ಗೆ ಸಲ್ಮಾನ್ ತುಟಿ ಪಿಟಕ್ ಅಂದಿರಲಿಲ್ಲ. ಇದೀಗ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ ನೆಟ್ಭಟಿಗರಿಂದ ರ್ಜರಿ ಟ್ರೋಲ್ ಆಗಿ ಮುಖಭಂಗ ಅನುಭವಿಸಿದ್ದಾರೆ.
‘ನನ್ನೆಲ್ಲ ಅಭಿಮಾನಿಗಳಲ್ಲಿ ವಿನಂತಿ. ದಯವಿಟ್ಟು ಸುಶಾಂತ್ ಸಿಂಗ್ ಅಭಿಮಾನಿಗಳ ಜತೆ ಕೈ ಜೋಡಿಸಿ. ಅವರ ಭಾವನೆಗಳಿಗೆ ಸ್ಪಂದಿಸಿ. ಅವರ ಕುಟುಂಬಕ್ಕೆ ಬೆಂಬಲ ನೀಡಿ. ಪ್ರೀತಿಪಾತ್ರರ ಕಣ್ಮರೆ ನಿಜಕ್ಕೂ ನೋವುತರಿಸುವಂಥದ್ದು’ ಎಂದು ಟ್ವೀಟ್ ಮೂಲಕ ಫ್ಯಾನ್ಸ್ಗೆ ಮನವಿ ಮಾಡಿದ್ದಾರೆ.
ಇನ್ನು ಈ ರೀತಿ ಟ್ವಿಟ್ ಮಾಡಿದ್ದೇ ತಡ ಒಂದಷ್ಟು ನೆಟ್ಟಿಗರು ಸಲ್ಮಾನ್ಗೆ ಸಂದೇಶಗಳ ಮೂಲಕ ತರಾಟೆ ತೆಗೆದುಕೊಂಡಿದ್ದಾರೆ. ಆಫ್ ಸ್ಕ್ರೀನ್ನಲ್ಲಿ ನಟನೆ ಚೆನ್ನಾಗಿಯೇ ಮಾಡುತ್ತೀರಿ.. ನಾವು ಇನ್ನು ಮುಂದೆ ನಿಮ್ಮ ಸಿನಿಮಾಗಳನ್ನು ನೋಡುವುದಿಲ್ಲ. ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೆ. ಇದೀಗ ಆ ಯೋಗ್ಯತೆ ನಿನಗಿಲ್ಲ..
ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೆ ಜಸ್ಟಿಸ್ ಫಾರ್ ಸುಶಾಂತ್ಸಿಂಗ್, ಬೈಕಾಟ್ ಸಲ್ಮಾನ್ ಖಾನ್, ಬೈಕಾಟ್ ಸ್ಟಾರ್ ಕಿಡ್ಸ್, ಬೈಕಾಟ್ ಬಾಲಿವುಡ್ ಎಂದೆಲ್ಲ ಹ್ಯಾಷ್ಟ್ಯಾಗ್ ಬಳಸಿ ಟ್ವಟಿರ್ನಲ್ಲಿ ಟ್ರೆಂಡ್ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ, ವಿ ಸ್ಟ್ಯಾಂಡ್ ವಿತ್ ಸಲ್ಮಾನ್ ಖಾನ್ ಹ್ಯಾಷ್ಟ್ಯಾಗ್ನಲ್ಲಿ ಸಲ್ಲು ಪರವಾಗಿ ಅವರ ಅಭಿಮಾನಿಗಳು ಕೋರಿದ್ದರು.
ಇದನ್ನೂ ಓದಿ: ಸುಶಾಂತ್ ಸಾವಿಗೆ ಇಸ್ರೇಲ್ನಲ್ಲೂ ಕಂಬನಿ!
ಇನ್ನು ಒಂದೇ ಒಂದು ಸಾವು ಇಡೀ ಬಾಲಿವುಡ್ ಅನ್ನೇ ನಡುಗಿಸುತ್ತಿದೆ. ಸ್ಟಾರ್ ಕಲಾವಿದರ, ನಿರ್ದೇಶಕ, ನಿರ್ಮಾಪಕರ ಅಸಲಿ ಮುಖ ಹೊರಬೀಳುತ್ತಿದೆ. ನೆಟ್ಟಿಗರು ಜಾಲತಾಣದಲ್ಲಿ ಸ್ಟಾರ್ಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಕುಟುಂಬ ನನ್ನನ್ನು ಹಾಳು ಮಾಡಿತು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ನಿರ್ದೇಶಕ ಅಭಿನವ್ ಕಶ್ಯಪ್, ಸಲ್ಮಾನ್ ಖಾನ್ ಒಡೆತನದ ಬೀಯಿಂಗ್ ಹ್ಯೂಮನ್ ಸಂಸ್ಥೆಯ ಅಸಲಿ ಮುಖವನ್ನು ಬಿಚ್ಚಿಟ್ಟಿದ್ದರು.