ಸ್ವತ: ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಹಿಂದಿ ಟೀಸರ್ ಬಗ್ಗೆ ತಿಳಿಸಿದ್ದಾರೆ. ಕಿಚ್ಚ ಸುದೀಪ್ ಅವರು, ''ಲೆಜೆಂಡ್, ಸೂಪರ್ಸ್ಟಾರ್, ಸೂಪರ್ ಹೂಮನ್ ಸಲ್ಮಾನ್ ಖಾನ್ ಸರ್ 'ವಿಕ್ರಾಂತ್ ರೋಣ' ಹಿಂದಿ ಅವತರಣಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳುವುದಕ್ಕೆ ಖುಷಿ, ಉತ್ಸಾಹವಿದೆ", ಎಂದು ಟ್ವೀಟ್ ಮಾಡಿದ್ದಾರೆ. ಅಂದಹಾಗೆ, 'ವಿಕ್ರಾಂತ್ ರೋಣ' ಸಿನಿಮಾವನ್ನು 50 ದೇಶಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡದಿಂದ ತಯಾರಿ ನಡೆಸಲಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ನಲ್ಲೂ ರಿಲೀಸ್ ಆಗಲಿರುವ ಸಿನಿಮಾ, ಇದಿಷ್ಟೇ ಅಲ್ಲದೆ ಅರಾಬಿಕ್, ಜರ್ಮನ್, ರಷ್ಯಾ, ಮ್ಯಾಂಡರೀನ್ ಭಾಷೆಗಳಲ್ಲೂ ತೆರೆಕಾಣಲಿದೆ ಎಂಬ ಮಾಹಿತಿ ಇದೆ. ಸದ್ಯಕ್ಕೆ, ಇಷ್ಟೆ ಮಾಹಿತಿ ಹೊರಬಿದ್ದಿದ್ದು, ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಇನ್ನೂ ಗೊತ್ತಾಗ ಬೇಕಿದೆ.