ಇದೀಗ, ಚಿತ್ರತಂಡ ದೆಹಲಿ ತಲುಪಿದ್ದು, ಇಂದು ಬೆಳಿಗ್ಗೆ ಪ್ರಚಾರಕ್ಕೆ ರೆಡಿಯಾಗಿರುವ ಚಿತ್ರತಂಡದ ಇಂದಿನ ಫೋಟೋಗಳು ಕೂಡಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನು, ಇಂದು ಸಂಜೆ ದೆಹಲಿಯ ಐನಾಕ್ಸ್ ನಲ್ಲಿ 'ಕೆಜಿಎಫ್ ಚಾಪ್ಟರ್ 2' ಸುದ್ದಿಗೋಷ್ಠಿ ನಡೆಯಲಿದೆ. ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ ಜೊತೆಗೆ ನಟ ಸಂಜಯ್ ದತ್ತ್, ನಟಿ ರವೀನಾ ಟಂಡನ್, ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರದ ದೆಹಲಿಯ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ.