ಓಟಿಟಿಯಲ್ಲಿ ರಾಧೆ ಹೊಸ ದಾಖಲೆ; ಸಲ್ಮಾನ್ ಖಾನ್ ಹೊಸ ಸಿನಿಮಾ

Salman
Published on

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ರಾಧೆ’ ಚಿತ್ರವು ಗುರುವಾರ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳ ಬದಲಾಗಿ ಓಟಿಟಿ ಯಲ್ಲಿ ನೇರವಾಗಿ ಬಿಡುಗಡೆಯಾಗು ತ್ತಿರುವುದರಿಂದ, ಅಷ್ಟಾಗಿ ಜನ ನೋಡು ವುದು ಸಂಶಯ ಎಂದು ಹೇಳಲಾಗಿತ್ತು. ಆದರೆ, ಆ ಮಾತು ಸುಳ್ಳಾಗಿದೆ. ಜೀ5 ಮತ್ತು ಜೀಪ್ಲೆಕ್ಸ್ ಓಟಿಟಿಯಲ್ಲಿ ಮಧ್ಯಾಹ್ನ 12 ಗಂಟೆಗೆ 12.5 ಲಕ್ಷ ಜನ ಏಕಕಾಲದಲ್ಲಿ ನೋಡುವುದಕ್ಕೆ ಹೋಗಿ ಸರ್ವರ್ ಕ್ರಾಶ್ ಆಗಿದ್ದು, ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಸರ್ವರ್ ಹ್ಯಾಂಗ್ ಆಗುವ ದೂರುಗಳೂ ಕೇಳಿಬಂದಿದ್ದು, ಕೆಲ ಹೊತ್ತಿನ ನಂತರ ಎಲ್ಲವೂ ಸರಿಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net