ಸ್ವರ್ಗದಲ್ಲಿದ್ದಾರಂತೆ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್! ಕಾರಣ? ಫೋಟೋ ವೈರಲ್...

Published on
ಬಾಲಿವುಡ್ ಭಾಯ್ ಜಾನ್ ನಟ ಸಲ್ಮಾನ್ ಖಾನ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದರೆ ತಪ್ಪಾಗುವುದಿಲ್ಲ. ಈ ವಿಷಯ ಅಭಿಮಾನಿಗಳಿಗೆ ಹಲವಾರು ಸಂದರ್ಭಗಳಲ್ಲಿ ಗೊತ್ತಾಗಿದೆ. ಇದೀಗ, ಭಾಯ್ ಜಾನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಒಂದು ಹೊಸ ಫೋಟೋ ನೆಟ್ಟಿಗರಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಲ್ಮಾನ್ ಅವರು ಹಂಚಿಕೊಂಡಿದ್ದಾರೆ.
ಅದರಲ್ಲಿಯೂ, ತಮ್ಮ ತಾಯಿಯ ಮಡಿಲಲ್ಲಿ ಅವರು ಮಗುವಿನಂತೆ ಮಲಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದು, ಆ ಫೋಟೋ ಈಗ ಸಖತ್ ವೈರಲ್ ಆಗಿತ್ತಿದ್ದು, ನಟನ ಅಭಿಮಾನಿಗಳ ಮೆಚ್ಚುಗೆ ಪಡೆಯುತ್ತಿದೆ. ಇನ್​ಸ್ಟಾಗ್ರಾಂನಲ್ಲಿ ಸಲ್ಮಾನ್ ಅವರಿಗೆ ಬರೋಬ್ಬರಿ 5 ಕೋಟಿಯಷ್ಟು ಅಂದರೆ 50 ಮಿಲಿಯನ್ ಅಷ್ಟು ಅನುಯಾಯಿಗಳು ಇದ್ದಾರೆ. ನಟ ಹಂಚಿಕೊಂಡ ತಾಯಿಯ ಫೋಟೋಗೆ ‘ತಾಯಿಯ ಮಡಿಲು, ಸ್ವರ್ಗ’ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಗೆ 2 ಮಿಲಿಯನ್ ಗೂ ಹೆಚ್ಚು ಲೈಕ್ಸ್ ಇದ್ದು, 32,000ಕ್ಕೂ ಹೆಚ್ಚು ಕಾಮೆಂಟ್​ಗಳು ಇವೆ.
ಜತೆಗೆ, ಈ ಹಿಂದೆ ಸಲ್ಮಾನ್ ಖಾನ್ ಕುಟುಂಬದೊಂದಿಗಿನ ಒಂದು ಫೋಟೋವನ್ನು ಹಂಚಿಕೊಂಡಿದ್ದರು. ಕಳೆದ ನವೆಂಬರ್​ನಲ್ಲಿ ಸಲ್ಮಾನ್ ತಂದೆಯ ಜನ್ಮದಿನದ ಸಂದರ್ಭದಲ್ಲಿ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆದಿದ್ದರು. ಆ ಸಂದರ್ಭದ ಫೋಟೋವನ್ನು ಅವರು ಶೇರ್ ಮಾಡಿದ್ದು, ಅದರಲ್ಲಿ ಸಲೀಮ್, ಸಲ್ಮಾ, ಅರ್ಪಿತಾ ಖಾನ್ ಶರ್ಮಾ, ಅತುಲ್ ಅಗ್ನಿಹೋತ್ರಿ, ಅಲ್ವಿರಾ ಖಾನ್ ಅಗ್ನಿಹೋತ್ರಿ ಮತ್ತು ಅರ್ಬಾಜ್ ಖಾನ್ ಕಾಣಿಸಿಕೊಂಡಿದ್ದರು. ಇದೀಗ, ಆ ಫೋಟೋ ಕೂಡಾ ವೈರಲ್ ಆಗುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net