ಆಗ, ಮೌನಿಯ ಮದುವೆ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇನ್ನು, ಸದ್ಯ ಕಾಶ್ಮೀರಕ್ಕೆ ತೆರಳಿರುವ ಈ ದಂಪತಿಯ ಹನಿಮೂನ್ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿವೆ. ಮೌನಿ ರಾಯ್ ಅವರ ಇನ್ಸ್ಟಾಗ್ರಾಂ ತುಂಬಾ ಈ ದಂಪತಿಯ ಕಾಶ್ಮೀರ ಪ್ರವಾಸದ ಚಿತ್ರಗಳೇ ತುಂಬಿಕೊಂಡಿದ್ದು ಎಲ್ಲರ ಗಮನ ಸೆಳೆಯುತ್ತಿವೆ, ಮೌನಿ ಶೇರ್ ಮಾಡುತ್ತಿರುವ ಫೋಟೋಗಳಿಗೆ ಲಕ್ಷ ಲಕ್ಷ ಲೈಕ್ಸ್, ಸಾವಿರ ಸಾವಿರ ಕಾಮೆಂಟ್ಗಳು ಬಂದಿವೆ.