ಆತ್ಮಹತ್ಯೆ ಯೋಚನೆಗಳಿಂದಲೇ ನಟ ಸಲ್ಮಾನ್ ಖಾನ್ ಮದುವೆಯಾಗಲಿಲ್ಲವೇ?

Published on
ಬಾಲಿವುಡ್ ಭಾಯ್ ಜಾನ್ ನಟ ಸಲ್ಮಾನ್ ಖಾನ್​​ಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಬರೋಬ್ಬರಿ 34 ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ, ಸದಾ ಫಿಟ್ ಅಂಡ್ ಫೈನ್ ಆಗಿರುವ ಮತ್ತು ನಗು ನಗುತ್ತಲೆ ಇರುವ ನಟ ಸಲ್ಮಾನ್ ಖಾನ್‌ಗೆ ಒಂದು ಕಾಯಿಲೆ ಇತ್ತು ಅಂದರೆ ನೀವು ನಂಬುತ್ತೀರಾ?. ಹೌದು, ಮೆಲ್ನೊಟಕ್ಕೆ ಸೂಪರ್ ಹೀರೋ ರೀತಿ ಕಾಣುವ ಸಲ್ಲು ಹಲವು ವರ್ಷಗಳಿಂದ ಒಂದು ದೀರ್ಘಕಾಲದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರಂತೆ.
ಹೌದು, ಈ ವಿಚಾರವನ್ನು ಸ್ವತಃ ನಟ ಸಲ್ಮಾನ್‌ ಅವರು ಒಂದು ಸಂದರ್ಶನದಲ್ಲಿ ಮನಸ್ಸು ಬಿಚ್ಚಿ ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ. ಅಂದಹಾಗೆ, ಸಲ್ಮಾನ್ ಅವರಿಗೆ 'ಟ್ರೈಜಿಮಿನಲ್ ನ್ಯೂರಾಲ್ಜಿಯಾ' (Trigeminal Neuralgia) ಎಂಬ ಕಾಯಿಲೆ ಇತ್ತಂತೆ. ಈ ಕಾಯಿಲೆಯಿಂದ ಬಹಳ ಬೇಸತ್ತು ಹೋಗಿದ್ದು, ಹಲವು ಬಾರಿ ಅವರು ಇದರಿಂದ ಆತ್ಮಹತ್ಯೆ ಯೋಚನೆಯನ್ನೂ ಮಾಡಿದ್ದರಂತೆ. ಸದ್ಯ, ಈ ವಿಚಾರ ಕೇಳಿ ನಟನ ಅಭಿಮಾನಿಗಳು ಮತ್ತು ಬಹುತೇಕ ಎಲ್ಲರೂ ಶಾಕ್ ಆಗಿದ್ದಾರೆ.
'ಟ್ರೈಜಿಮಿನಲ್ ನ್ಯೂರಾಲ್ಜಿಯಾ' ಅಂದರೆ ಒಂದು ರೀತಿಯ ನರರೋಗ. ಇದರಿಂದ ಬಹಳಷ್ಟು ನೋವು ಉಂಟಾಗುತ್ತಂತೆ. ಇನ್ನು, ಈ ಕಾಯಿಲೆಯಿಂದ ತಲೆ, ದವಡೆ ಹೀಗೆ ಮುಂತಾದ ಮುಖದ ಭಾಗಗಳಲ್ಲಿ ನೋವು ಇರುತ್ತಂತೆ. ಇಲ್ಲಿ ಗಮನಾರ್ಹ ವಿಷಯವೆಂದರೆ, ಈ ಕಾಯಿಲೆಯಿಂದ ಸಲ್ಮಾನ್ ಅವರು ಬರೋಬ್ಬರಿ 9 ರಿಂದ 10 ವರ್ಷಗಳ ಕಾಲ ನರಕ ಅನುಭವಿಸಿದ್ದಾರಂತೆ. 'ಟ್ರೈಜಿಮಿನಲ್ ನ್ಯೂರಾಲ್ಜಿಯಾ' ರೋಗ ಮುಖದ ನರಗಳಲ್ಲಿ ಕಂಡುಬರುತ್ತೆ.
ಸದ್ಯ, ಈ ಕಾಯಿಲೆಯಿಂದ ಸಲ್ಲು ಗುಣಮುಖರಾಗಿದ್ದಾರೆ. ಇನ್ನು, 2017 ರಲ್ಲಿ ಕೂಡಾ ನಟ ಸಲ್ಮಾನ್ 'ಟ್ಯೂಬ್ ಲೈಟ್' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಅವರಿಗಿರುವ 'ಟ್ರೈಜಿಮಿನಲ್ ನ್ಯೂರಾಲ್ಜಿಯಾ' ಕಾಯಿಲೆ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ಈ ಕಾಯಿಲೆಯ ನೋವು ತಾಳಲಾರದೇ ಆತ್ಮಹತ್ಯೆಗೆ ಯತ್ನ ಮಾಡಿದ್ದರು ಎಂದು ಸಲ್ಲು ತಿಳಿಸಿದ್ದರು. ಇದೀಗ, ಅಭಿಮಾನಿಗಳ ಪ್ರೀತಿಯ ಸಲ್ಲು ದುಬೈನ ಬುರ್ಜ್ ಖಲೀಫಾದ ಹತ್ತಿರದಲ್ಲಿ ನಿಂತು ಒಂದು ಫೋಟೋ ಹಂಚಿಕೊಂಡಿದ್ದು, 2020ರ ದುಬೈ ಎಕ್ಸ್‌ಪೋದಲ್ಲಿ ಸಲ್ಲು ಭಾಗಿ ಆಗುವ ಬಗ್ಗೆ ತಿಳಿಸಿದ್ದಾರೆ.
ಸದ್ಯ, ಈ ಫೋಟೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಕಾಮೆಂಟ್​ಗಳಲ್ಲಿ ಪ್ರಶ್ನಿಸ ತೊಡಗಿದ್ದಾರೆ. 'ಟ್ರೈಜಿಮಿನಲ್ ನ್ಯೂರಾಲ್ಜಿಯಾ'ದಿಂದ ಗುಣಮುಖರಾಗಿರುವ ಸಲ್ಮಾನ್​ಗೆ ಕೆಲವರು ಶುಭ ಹಾರೈಸುತ್ತಿದ್ದರೇ, ಹಲವರು ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅದರಲ್ಲಿ, ಕೆಲವು ಅಭಿಮಾನಿಗಳು 'ಟ್ರೈಜಿಮಿನಲ್ ನ್ಯೂರಾಲ್ಜಿಯಾ' ಹಾಗೂ ಆತ್ಮಹತ್ಯೆ ಯೋಚನೆಗಳಿಂದಲೇ ಸಲ್ಲು ಇನ್ನು ಮದುವೆಯಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ, ಇನ್ನು ಕೆಲವರು ಸಲ್ಲು ಈಗಲಾದರೂ ಮದುವೆಯಾಗುತ್ತಾರಾ ಎಂದು ಕೇಳಿದ್ದಾರೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net