ಒಳಉಡುಪಲ್ಲಿ ಫೋಟೋಶೂಟ್​ ಮಾಡಿಸೋ ಧೈರ್ಯ ಸೌತ್​ ನಟಿಯರಿಗಿಲ್ಲ ಎಂದ ನೆಟ್ಟಿಗನಿಗೆ ಸಾಕ್ಷಿ ತಿರುಗೇಟು!

Sakshi Agarwal
Published on

ಚೆನ್ನೈ​: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್​ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಇದೀಗ ಅದೇ ರೀತಿಯ ಕಾಮೆಂಟ್​ಗೆ ನಟಿ ಸಾಕ್ಷಿ ಅಗರವಾಲ್​ ಖಡಕ್​ ಉತ್ತರ ನೀಡಿದ್ದಾರೆ.

ನಟಿ ಹಾಗೂ ಮಾಡೆಲ್​ ಆಗಿರುವ ಸಾಕ್ಷಿ ಅಗರವಾಲ್​ ಕನ್ನಡಿಗರಿಗೆ ಇವರ ಪರಿಚಯ ಇಲ್ಲದಿರಬಹುದು. ಏಕೆಂದರೆ, ಇದುವರೆಗೂ ಇವರು ಕನ್ನಡದಲ್ಲಿ ನಟಿಸಿರುವುದು ಒಂದೇ ಒಂದು ಚಿತ್ರದಲ್ಲಿ ಮಾತ್ರ. ಹಿರಿಯ ನಟ ಜಗ್ಗೇಶ್​ ಅಭಿನಯದ “ಸಾಫ್ಟ್​ವೇರ್ ಗಂಡ” ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಸಾಕ್ಷಿ ಮುಖ ಪರಿಚಯ ಇದ್ದೇ ಇರುತ್ತದೆ. ಏಕೆಂದರೆ, ಆಗಾಗ ಇವರು ಸಿಕ್ಕಾಪಟ್ಟೆ ಹಾಟ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ.

ದಕ್ಷಿಣ ಭಾರತದ ನಟಿಯರಿಗೆ ಧೈರ್ಯವಿಲ್ಲ

ಇದೀಗ ತನ್ನನ್ನು ಕೆಣಕಿದ ನೆಟ್ಟಿಗನೊಬ್ಬನಿಗೆ ಖಡಕ್​ ತಿರುಗೇಟು ನೀಡುವ ಮೂಲಕ ಸಾಕ್ಷಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾಕ್ಷಿ ಮಾಮೂಲಿಯಂತೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗನೊಬ್ಬ "ಒಳಉಡುಪಿನಲ್ಲಿ ಫೋಟೋಶೂಟ್​ ಮಾಡಿಸುವ ಧೈರ್ಯ ದಕ್ಷಿಣ ಭಾರತದ ನಟಿಯರಿಗಿಲ್ಲ" ಎಂದು ಕಾಮೆಂಟ್​ ಮಾಡುವ ಮೂಲಕ ಸಾಕ್ಷಿ ಅವರನ್ನು ಕೆಣಕಿದ್ದಾನೆ.

ಮೈಮಾಟ ಪ್ರದರ್ಶನದ ಮೇಲಲ್ಲ

ನೆಟ್ಟಿಗನ ಉತ್ತರಕ್ಕೆ ಸರಿಯಾಗಿಯೇ ತಿರುಗೇಟು ನೀಡಿರುವ ಸಾಕ್ಷಿ, ದಕ್ಷಿಣ ಭಾರತದ ನಟಿಯರಿಗೆ ಅವರ ನಟನೆಯಲ್ಲಿನ ಪ್ರತಿಭೆಯ ಮೇಲೆ ನಂಬಿಕೆ ಇದೆಯೇ ಹೊರತು ಮೈಮಾಟ ಪ್ರದರ್ಶನದ ಮೇಲಲ್ಲ ಎಂದಿದ್ದಾರೆ. ಸಾಕ್ಷಿ ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಸಾಕ್ಷಿಯ ಕಾಲೆಳೆಯುವ ಪ್ರಯತ್ನ ಮಾಡಬೇಡಿ, ಅವರು ಸರಿಯಾದ ಉತ್ತರದೊಂದಿಗೆ ಹಿಂದಿರುಗಿಸುತ್ತಾರೆ ಎಂದು ಜಾಲತಾಣದಲ್ಲಿ ಮೆಚ್ಚುಗೆಯ ಪೋಸ್ಟ್​ಗಳನ್ನು ಹರಿಬಿಟ್ಟಿದ್ದಾರೆ.

Sakshi Agarwal 1

ಅಂದಹಾಗೆ ಸಾಕ್ಷಿ ಅಗರವಾಲ್​, ಕನ್ನಡದಲ್ಲಿ ನಟಿಸಿದ್ದೂ ಒಂದೇ ಚಿತ್ರವಾದರೂ ತಮಿಳು ಮತ್ತು ಮಲಯಾಳಂನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ನಟ ಕಮಲ್​ ಹಾಸನ್​ ನಿರೂಪಣೆ ಮಾಡಿದ್ದ ತಮಿಳು ಬಿಗ್​ಬಾಸ್​ ಸೀಸನ್​ 3ರಲ್ಲೂ ಇವರು ಕಾಣಿಸಿಕೊಂಡಿದ್ದರು. ನಟ ರಜಿನಿಕಾಂತ್​ ಅಭಿನಯದ ಕಾಳ ಹಾಗೂ ಅಜಿತ್​ ನಟನೆಯ ವಿಶ್ವಾಸಂ ಮತ್ತು ಅರಣ್ಮನೈ-3ನಂತಹ ಬ್ಲಾಕ್​ ಬಸ್ಟರ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ತಮಿಳಿಗರಿಗೆ ಇವರ ಪರಿಚಯ ತುಂಬಾ ಚೆನ್ನಾಗಿಯೇ ಇದೆ.

ಸಿನಿಮಾ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಾಕ್ಷಿ, ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿರುತ್ತಾರೆ. ಸಾಕ್ಷಿ ಅವರು ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 2 ಮಿಲಿಯನ್​ ಫಾಲೋವರ್​ಗಳನ್ನು ಹೊಂದಿದ್ದಾರೆ. ಅವರು ಯಾವುದೇ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳಲಿ ಅದು ಬೇಗನೆ ವೈರಲ್​ ಆಗಿಬಿಡುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net