ವರ್ಣತರಂಗದಲ್ಲಿ ಮತ್ತೆ ಮೇಘನಾ ಆದ ಸಾಕ್ಷಿ

Meghana
Published on

ಬೆಂಗಳೂರು: ಮೇಘನಾ ಮತ್ತೆ ಹೆಸರು ಬದಲಾಯಿಸಿಕೊಂಡಿದ್ದಾರೆ. ಯಾವ ಮೇಘನಾ ಎಂಬ ಪ್ರಶ್ನೆ ಬರಬಹುದು. ಈ ಹಿಂದೆ ‘ಬೆಸ್ಟ್ ಫ್ರೆಂಡ್ಸ್’ ಮತ್ತು ಮೋಹನ್ ನಿರ್ದೇಶನದ ‘ಲೋಫರ್ಸ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಸಾಕ್ಷಿ, ಇದೀಗ ಮೇಘನಾ ಎಂಬ ಹೆಸರಿನಿಂದ ‘ವರ್ಣತರಂಗ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆ ನೋಡಿದರೆ, ಮೇಘನಾ ಹೆಸರು ಬದಲಾಯಿಸಿಕೊಳ್ಳುತ್ತಿರುವುದು ಇದು ಎರಡನೇ ಸಲ. ಈ ಕುರಿತು ಮಾತನಾಡುವ ಅವರು, ‘ನನ್ನ ಮೂಲ ಹೆಸರು ಮೇಘನಾ. ಆದರೆ, ನ್ಯೂಮರಾಲಜಿ ಪ್ರಕಾರ ಸಾಕ್ಷಿ ಎಂದಿಟ್ಟುಕೊಂಡರೆ ಒಳ್ಳೆಯದಾಗುತ್ತದೆ ಎಂದು ಯಾರೋ ಹೇಳಿದರು. ಅದರಂತೆ ಹೆಸರು ಬದಲಾಯಿಸಿಕೊಂಡೆ. ಆ ನಂತರ ಮೊದಲ ಹೆಸರೇ ಚೆನ್ನಾಗಿದೆ ಎಂದೆನಿಸಿತು. ಹಾಗಾಗಿ, ಮತ್ತೆ ಹೆಸರು ಬದಲಾಯಿಸಿಕೊಂಡಿದ್ದೇನೆ. ‘ಜೈವೀರ್’, ‘ಲಿಸಾ’ ಮತ್ತು ‘ಪದ್ಮಾವತಿ’ ಎಂಬ 3 ಚಿತ್ರಗಳಲ್ಲಿ ನಟಿಸಿದ್ದೇನೆ. ಈ ವರ್ಷ ಮೂರೂ ಚಿತ್ರಗಳು ಬಿಡುಗಡೆಯಾಗುತ್ತವೆ’ ಎನ್ನುತ್ತಾರೆ ಮೇಘನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net