More

    Video| ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ, ಆಫೀಸ್ ಬೇರೆ ಮಾಡ್ಬೇಕಾ?: ಡಾ.ರಾಜ್​ ಕುರಿತು ನಾಲಿಗೆ ಹರಿಬಿಟ್ಟ ಶಾಸಕ

    ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರ ವಿಷಯದಲ್ಲಿ ನಾಲಿಗೆ ಹರಿಯಬಿಟ್ಟ ಶಾಸಕ ಎನ್​.ಎ.ಹ್ಯಾರಿಸ್​ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

    ವಿವಾದ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಹ್ಯಾರಿಸ್​, ಕ್ಷಮೆಯಾಚಿಸಿದ ವಿಡಿಯೋವನ್ನು ತನ್ನ ಫೇಸ್​ಬುಕ್​ನಲ್ಲಿ ಬಿಡುಗಡೆ ಮಾಡಿದ್ದಾರೆ. ಡಾ.ರಾಜ್​ ಅಂದ್ರೆ ಕನ್ನಡನಾಡಿನ ಗೌರವ, ಕನ್ನಡದ ಕಣ್ಮಣಿ. ಅಣ್ಣಾವ್ರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಊರೂರಲ್ಲಿ ಅಣ್ಣಾವ್ರ ಪ್ರತಿಮೆ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ. ಅವರ ಹೆಸರಲ್ಲಿ ಅನ್ನದಾನ, ರಕ್ತದಾನ, ಆರೋಗ್ಯ ಶಿಬಿರದಂತಹ ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಹೀಗಿರುವ ಶಾಸಕ ಹ್ಯಾರಿಸ್​ ಬಹಿರಂಗವಾಗಿಯೇ ಅಣ್ಣಾವ್ರ ಪ್ರತಿಮೆ ವಿವಾರವಾಗಿ ನಾಲಗೆ ಹರಿಯಬಿಟ್ಟಿದ್ದಾರೆ. ಇದನ್ನೂ ಓದಿರಿ ಬನ್ನಿ ಬ್ರದರ್​, ರಾಮಮಂದಿರಕ್ಕೆ ಹೋಗಿ ಬರೋಣ: ಎಚ್​ಡಿಕೆಯನ್ನು ಶ್ರೀರಾಮುಲು ಕರೆದಿದ್ದೇಕೆ?

    ‘ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ, ಅದರಲ್ಲಿ ಆಫೀಸ್ ಬೇರೆ ಮಾಡಿ ಕೊಡುವುದಕ್ಕೆ ಆಗುತ್ತಾ? ಮೇಲೆ ಪ್ರೊಟೆಕ್ಷನ್ ಏನೂ ಬೇಕಾಗಿಲ್ಲ. ಓಪನ್ ಆಗೆ ಇಡಿ. ಅವರ್ಯಾರೋ ರಾಜ್​ಕುಮಾರ್​ಗೆ ಅಂತ ಮಾಡಿರ್ತಾರೆ, ಅದನ್ನು ತೆಗಿಬೇಕು. ಸ್ಟ್ಯಾಚ್ಯುಗೆಲ್ಲಾ ಕವರ್ ಮಾಡಿ ಮನೆಯಲ್ಲಿ ಇಟ್ಟಿದ್ರೆ ಆಗಿರ್ತಿತ್ತು, ರೋಡಲ್ಲಿ ಯಾಕೆ ಇಡುತ್ತಾರೆ ಅಲ್ವಾ? ಅದನ್ನ ಯಾರ್ ಕೇಳಿರುವವರು? ಬುದ್ದಿ ಇಲ್ಲ. ಏನ್ ಮಾಡೋದು? ಏನಾದ್ರು ಹೇಳಿದ್ರೆ ಬೇರೆ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ. ನಾನು ಅವಾಗ್ಲೂ ಹೇಳಿದೆ ಬೇಡಪ್ಪ ಅಂತ. ಅವಾಗ ಸ್ವಲ್ಪ ಕಲೆಕ್ಷನ್ ಮಾಡಿದ್ರು. ರಾಜ್​ಕುಮಾರ್ ರೇ ಇದ್ದಾರೆ, ಬೋರ್ಡ್ ಏನಕ್ಕೆ?’ ಎಂದು ಹ್ಯಾರಿಸ್​ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ.

    Video| ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ, ಆಫೀಸ್ ಬೇರೆ ಮಾಡ್ಬೇಕಾ?: ಡಾ.ರಾಜ್​ ಕುರಿತು ನಾಲಿಗೆ ಹರಿಬಿಟ್ಟ ಶಾಸಕಮಂಗಳವಾರ ಸಂಜೆ ದೊಮ್ಮಲೂರಿಗೆ ಕಾಮಗಾರಿ ಪರಿಶೀಲನೆಗೆಂದು ಭೇಟಿ ನೀಡಿದ್ದ ವೇಳೆ ಅಲ್ಲಿದ್ದ ಡಾ.ರಾಜ್​ ಪ್ರತಿಮೆ ಕುರಿತು ಈ ಮಾತುಕತೆ ಆಗಿದೆ ಎಂದು ಹೇಳಲಾಗಿದೆ. ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಹ್ಯಾರಿಸ್​, ‘ನಿನ್ನೆ ದೊಮ್ಮಲೂರಿನಲ್ಲಿ ಕೆಲಸ ನಡೆಯುತ್ತಿದ್ದು, ಇನ್ಸ್‌ಪೆಕ್ಷನ್ ಮಾಡಲು ಹೋಗಿದ್ದೆ. ಅಂಬೇಡ್ಕರ್ ಸ್ಟ್ಯಾಚು ಪರಿಶೀಲನೆ ಮಾಡಲಾಗ್ತಿತ್ತು. ಅಲ್ಲಿ ಮುಚ್ಚಿದ್ದ ಪ್ರತಿಮೆ ಇರೋದು ಗಮನಕ್ಕೆ ಬದಿದ್ದು, ಅಣ್ಣಾವ್ರ ಪ್ರತಿಮೆ ಅನ್ನೋದು ಸ್ಪಷ್ಟವಾಯ್ತು. ನಾನು ಡಾ.ರಾಜ್​ಕುಮಾರ್ ಅವರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ರಾಜ್​ಕುಮಾರ್ ಜೊತೆ ಒಡನಾಟ ಇಟ್ಟುಕೊಂಡಿದ್ದವ ನಾನು. ಅವರನ್ನ ನೋಡಿ ಬೆಳೆದವನು ನಾನು. ಸ್ಟ್ಯಾಚು ಇಟ್ಟು ಯಾರಾದ್ರೂ ಕವರ್ ಮಾಡ್ತಾರಾ? ಪ್ರತಿಮೆ ಇಟ್ಟು ಮುಚ್ಚೋದು ಸರಿಯಲ್ಲ. ನನ್ನ ಬಗ್ಗೆ ವಿಡಿಯೋ ಎಡಿಟ್ ಮಾಡಿ ಅಪಪ್ರಚಾರ ಮಾಡ್ತಿದ್ದಾರೆ. ನಾನು ಡಾ. ರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ. ಸಮಯ ಸಿಕ್ಕಾಗೆಲ್ಲ ಅವರ ಹಾಡು ಕೇಳುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿರಿ ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

    ಫೇಸ್​ಬುಕ್ ಲೈವ್​ನಲ್ಲಿ ಮಾತನಾಡಿದ ಹ್ಯಾರಿಸ್​, ‘ನಾನು ಡಾ.ರಾಜ್ ಕುಮಾರ್ ವಿರುದ್ಧ ಯಾವುದೇ ಹೇಳಿಕೆ‌ ನೀಡಿಲ್ಲ. ಒಂದು ವೇಳೆ ಯಾರಿಗಾದರೂ ಬೇಜಾರ್ ಆಗಿದ್ರೆ ಕ್ಷಮೆ ಕೇಳುತ್ತೇನೆ. ದಯವಿಟ್ಟು ಇದನ್ನ ಇಲ್ಲಿಗೆ ಬಿಟ್ಟುಬಿಡಿ’ ಎಂದು ಮನವಿ ಮಾಡಿದ್ದಾರೆ.

    ವಿಡಿಯೋ ಎಡಿಟ್​ ಮಾಡಿದ್ದಾರೆ ಎಂದಿರುವ ಹ್ಯಾರಿಸ್​ರ ಮಾತಿನ ಸತ್ಯಾಸತ್ಯತೆ ಬಯಲಾಗಿಬೇಕಿದೆ. ವಿವಾದಿಂದ ಹೊರಬರಲು ವಿಡಿಯೋ ಎಡಿಟ್​ ಎಂಬ ಅಸ್ತ್ರ ಪ್ರಯೋಗಿಸಿದರೇ? ಅಥವಾ ನಿಜಕ್ಕೂ ವಿಡಿಯೋ ಎಡಿಟ್​ ಆಗಿದೆಯೋ ಬಳಿಕ ತಿಳಿಯಲಿದೆ.

    ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್​ಗೇಟ್​ ಸಮೀಪ ಇತ್ತೀಚಿಗಷ್ಟೇ ಸಾಹಸಸಿಂಹ ಡಾ.ವಿಷ್ಣುವರ್ಧನ್​ರ ಪ್ರತಿಮೆಯನ್ನು ಕಿಡಿಗೇಡಿಗಳು ಹಾನಿ ಮಾಡಿದ್ದರು. ಈ ಕಹಿ ಘಟನೆ ಮಾಸುವ ಮುನ್ನವೇ ಕನ್ನಡದ ಮೇರುನಟನ ಬಗ್ಗೆ ಅವಹೇಳನಕಾರಿ ಮಾತು ಕೇಳಿಬಂದಿರುವುದು ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ.

    ಪಾಸ್​ಪೋರ್ಟ್- ಬೋರ್ಡಿಂಗ್​ ಪಾಸ್​ ಕೊಟ್ಟು ಮದ್ವೆಗೆ ಆಹ್ವಾನಿಸಿದ ನವಜೋಡಿ! ಸಖತ್​ ವೈರಲ್​ ಆಗ್ತಿದೆ ಈ ಮದ್ವೆ

    ಬನ್ನಿ ಬ್ರದರ್​, ರಾಮಮಂದಿರಕ್ಕೆ ಹೋಗಿ ಬರೋಣ: ಎಚ್​ಡಿಕೆಯನ್ನು ಶ್ರೀರಾಮುಲು ಕರೆದಿದ್ದೇಕೆ?

    ನರ್ಸಿಂಗ್​ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ! ಪ್ರಕರಣ ಬೆನ್ನತ್ತ ಪೊಲೀಸರಿಂದ ಸ್ಫೋಟಕ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts