ಗೋದ್ರೆಜ್ ಶ್ಯಾಂಪೂಗೆ ಸೈಫ್ ಅಲಿ ಖಾನ್​ ರಾಯಭಾರಿ

Saif
Published on

ಭಾರತದ ಬೇಡಿಕೆಯ ಗೋದ್ರೆಜ್ ಎಕ್ಸ್​ಪರ್ಟ್ ಈಸಿ ಹೇರ್ ಕಲರ್ ಶ್ಯಾಂಪೂ ಉತ್ಪನ್ನಕ್ಕೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾಯಭಾರಿಯಾಗಿದ್ದಾರೆ. ಈ ವಿಚಾರವನ್ನು ಗೋದ್ರೆಜ್ ಕನ್ಸೂಮರ್ ಪ್ರೊಡಕ್ಟ್ಸ್​ ಲಿಮಿಟೆಡ್​ನ ಸಿಇಒ ಸುನೀಲ್ ಕಟಾರಿಯಾ ಘೋಷಿಸಿದ್ದಾರೆ. 5 ನಿಮಿಷದಲ್ಲಿ ಬಿಳಿ ಕೂದಲನ್ನು ಕಪು್ಪ ಮಾಡುವ ಗೋದ್ರೆಜ್ ಎಕ್ಸ್​ಪರ್ಟ್ ಈಸಿ ಹೇರ್ ಕಲರ್ ಶ್ಯಾಂಪೂ ದೇಶದಲ್ಲಿ ಬಹುಬೇಡಿಕೆಯ ಉತ್ಪನ್ನವಾಗಿದೆ. ಇದೀಗ ಸೈಫ್ ಅಲಿ ಖಾನ್ ಈ ಉತ್ಪನ್ನದ ಮುಖವಾಗಿದ್ದಾರೆ.

‘ಹೇರ್ ಕಲರ್ ಕ್ಯಾಟಗೆರಿಯಲ್ಲಿ ಗೋದ್ರೆಜ್ ಎಕ್ಸ್​ಪರ್ಟ್ ಈಸಿ ಹೊಸ ಆವಿಷ್ಕಾರ ಮಾಡಿದೆ. ಮೂರು ಬಣ್ಣಗಳ ಮೂಲಕ ನಾವಿನ್ಯತೆ ಪಡೆದುಕೊಂಡಿದೆ. ಇದೀಗ ಸೈಫ್ ಅವರ ಸಹಭಾಗಿತ್ವದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ನಮ್ಮ ಗುರಿ ಸಾಧಿಸಲಿದ್ದೇವೆ’ ಎಂಬುದು ಸಿಇಒ ಸುನೀಲ್ ಕಟಾರಿಯಾ ಅಭಿಪ್ರಾಯ. ‘ಗೋದ್ರೆಜ್ ಭಾರತದ ಮೊದಲ ಹೇರ್ ಕಲರ್ ಬ್ರಾಂಡ್. ಆರಂಭದಲ್ಲಿ ಪುಡಿಯ ರೂಪದಲ್ಲಿದ್ದ ಈ ಉತ್ಪನ್ನ, ಇದೀಗ ಶ್ಯಾಂಪೂ ಮೂಲಕ ಬಳಕೆದಾರ ಸ್ನೇಹಿಯಾಗಿದೆ. 5 ನಿಮಿಷದಲ್ಲಿ ಬಿಳಿಯಾದ ಕೂದಲನ್ನು ಕಪು್ಪ ಮಾಡುತ್ತದೆ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net