More

    ತಾತ ಸಿಎಂ ಆಗಿದ್ದರು, ಈಗ ತಂದೆಯೂ ಸಿಎಂ; ಮೊಮ್ಮಗ ಕೂಡ ರಾಜಕೀಯಕ್ಕೆ ಬರ್ತಾರಾ?

    ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ರಾಜ್ಯದ 20ನೇ ಮುಖ್ಯಮಂತ್ರಿ ಆಗಿ ಆಯ್ಕೆ ಆಗುತ್ತಿದ್ದಂತೆ ಅವರ ಪುತ್ರ ಭರತ್ ಸಂತೋಷ ವ್ಯಕ್ತಪಡಿಸಿದ್ದು, ಆಯ್ಕೆ ಸಂಬಂಧ ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಸುದ್ದಿಗಾರರ ಜತೆ ಹಂಚಿಕೊಂಡಿದ್ದಾರೆ.

    ಇದು ಖುಷಿಯ ದಿನ, ಇದಕ್ಕೆ ಕಾರಣರಾದ ಪ್ರಧಾನಿ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ತಂದೆಯವರಿಗೆ ಒಂದು ಜವಾಬ್ದಾರಿ ಕೊಟ್ಟಿದ್ದಾರೆ, ಅದನ್ನು ಅವರು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ಭರವಸೆ ಇದೆ ಎಂದು ಭರತ್ ಹೇಳಿದರು.

    ಸಿಎಂ ಸ್ಥಾನಕ್ಕಾಗಿ ತಂದೆ ಲಾಬಿ ಮಾಡಿದವರೇ ಅಲ್ಲ, ಅದಕ್ಕಾಗಿ ಈ ಅವಕಾಶ ಕೊಡಲಾಗಿದೆ ಅನಿಸುತ್ತದೆ. ತಂದೆ ಸಿಎಂ ಆಗುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ, ಎಲ್ಲ ದೇವರು, ಗುರು-ಹಿರಿಯರು ಹಾಗೂ ಹೈಕಮಾಂಡ್ ಆಶೀರ್ವಾದದಿಂದ ತಂದೆ ಸಿಎಂ ಆಗಿದ್ದಾರೆ ಎಂದು ಬೊಮ್ಮಾಯಿ ಪುತ್ರ ಅಭಿಪ್ರಾಯಪಟ್ಟರು.

    ತಾತ ಸಿಎಂ ಆಗಿದ್ದರು, ಈಗ ತಂದೆಯೂ ಸಿಎಂ ಆಗಿದ್ದಾರೆ, ಮುಂದೆ ನೀವು ರಾಜಕೀಯಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭರತ್, ನಾನು ಉದ್ಯಮಿ, ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಿಎಂ ಬಸವರಾಜ ಬೊಮ್ಮಾಯಿ: ಇಂದೇ ಹಕ್ಕುಮಂಡನೆ, ನಾಳೆ ಮಧ್ಯಾಹ್ನ ಪ್ರಮಾಣವಚನ ಸ್ವೀಕಾರ..

    ಅಪ್ಪ-ಮಗ ಮುಖ್ಯಮಂತ್ರಿಯಾದ ರಾಜ್ಯದ ಎರಡನೇ ಕುಟುಂಬ ಇದು..

    ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಇಂಜಿನಿಯರಿಂಗ್ ಪದವೀಧರ, ಜಲಸಂಪನ್ಮೂಲ ವಿಷಯತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts