

ಬೆಂಗಳೂರು: ಸಿನಿಮಾ ಮೂಲಕ ಯುವರತ್ನ ಎನಿಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನು ಕರ್ನಾಟಕ ರತ್ನ ಮಾತ್ರವಲ್ಲ, ಸಹಕಾರ ರತ್ನ ಎಂದು ಸಹ ಕರೆಸಿಕೊಳ್ಳಲಿದ್ದಾರೆ. ಏಕೆಂದರೆ ಕೆಎಂಎಫ್ ಉತ್ಪನ್ನಗಳ ರಾಯಭಾರಿಯಾಗಿ ಉಚಿತ ಸೇವೆ ಸಲ್ಲಿಸಿದ್ದ ನಟ ಪುನೀತ್ ರಾಜಕುಮಾರ್ ಅವರನ್ನು ವಿಶೇಷ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪುನೀತ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜಕುಮಾರ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದರು. ಇದೀಗ ಪುನೀತ್ಗೆ ಮತ್ತೊಂದು ಮರಣೋತ್ತರ ಪ್ರಶಸ್ತಿಯನ್ನು ಸಹಕಾರ ಇಲಾಖೆ ಘೋಷಿಸಿದೆ. ಅಲ್ಲದೆ ಸಹಕಾರ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ 57 ಮಂದಿಗೆ ಸಹಕಾರ ರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ.
ಬೆಂಗಳೂರಿನ ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ಮಾ. 20ರಂದು ಬೆಳಗ್ಗೆ 11ಕ್ಕೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ 15 ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ‘ಸಹಕಾರ ರತ್ನ 100 ಅರ್ಜಿ ಬಂದಿವೆ. ಪ್ರತಿ ವರ್ಷ ಆರು ಮಂದಿಗೆ ಪ್ರಶಸ್ತಿ ನೀಡುತ್ತಿದ್ದೆವು. ಆದರೆ, ಕಳೆದ ವರ್ಷ ಜಿಲ್ಲೆಗೆ ಒಬ್ಬರು ಎಂದು ನಿರ್ಧರಿಸಿದ್ದೇವೆ. ಒಟ್ಟು 57 ಮಂದಿ ಸಹಕಾರ ರಂಗದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮೇಖರ್ ತಿಳಿಸಿದ್ದಾರೆ.
ಬಿ.ಕೆ.ವೇಣುಗೋಪಾಲ್, ಪಿ.ನರಸಿಂಹಮೂರ್ತಿ, ಎಂ.ರಾಜಶೇಖರ ರೆಡ್ಡಿ, ಕೆ.ಎಂ. ನಾಗರಾಜ್, ಬಿ.ಎನ್.ನಾಗಮಣಿ, ಎಚ್.ಸಿ.ಕೃಷ್ಣ, ರಮೇಶ್ ಬಾಬು, ಆವಲಹಳ್ಳಿ ಚಂದ್ರಪ್ಪ ಆರ್., ಬಿ.ಶ್ರೀನಿವಾಸ್, ವಿ.ಗಂಗಪ್ಪ, ಎನ್.ಬಾಲಚಂದ್ರನ್, ಬಿ.ಎಚ್.ಕೃಷ್ಣಾರೆಡ್ಡಿ, ರೀಟಾ, ಎಂ.ವೀರಪ್ಪ, ಜಿಂಕಲು ಬಸವರಾಜು, ಎಂ.ಬಿ.ಚನ್ನವೀರಪ್ಪ, ನಾಗರಾಜ ಶೆಟ್ಟಿ, ವಿ.ರಾಜು, ಎಚ್.ಎಸ್.ಮಂಜಪ್ಪ, ಜಗದೀಶಪ್ಪ ಬಣಕಾರ, ಡಾ.ಜೆ.ಆರ್.ಷಣ್ಮುಖಪ್ಪ, ಜಿ.ಆರ್.ಶ್ರೀನಿವಾಸನ್, ಪ್ರೇಮಕುಮಾರಿ, ವಾಸು, ಡಾ.ಬೃಹದಾಂಬ, ಎಚ್. ಸಿದ್ದಯ್ಯ, ಸಿ.ಪಿ.ಉಮೇಶ್, ಜಿ.ಟಿ.ಪುಟ್ಟಸ್ವಾಮಿ, ಗುರುಸ್ವಾಮಿ, ಎಂ.ಬಿ.ದೇವಯ್ಯ, ಕೊಡಂದೇರ ಪಿ.ಗಣಪತಿ, ವೈ.ಎಸ್.ಸುಬ್ರಮಣ್ಯ, ಎಸ್.ಎಸ್.ರಾಮಸ್ವಾಮಿ, ಟಿ.ವಿ.ಶಿವಶಂಕರಪ್ಪ, ಸೀತಾರಾಮ ರೈ ಸವಣೂರು, ಚಿತ್ತರಂಜನ್ ಬೋಳಾರ್, ಕೆ.ರವಿರಾಜ ಹೆಗ್ಡೆ, ಕೋಡಿಮೋಳೆ ರಾಜಶೇಖರ, ಚಂದ್ರಕಾಂತ ಸೋಮಶೇಖರ ಕೋಠಿವಾಲೆ, ಬಾಳಸಾಹೇಬ ಜೀವಾಜಿರಾವ ಮಾಂಗಲೇಕರ, ರಾಜಶೇಖರ ಸಿದ್ದಪ್ಪ ಹಾವಣಗಿ, ಲಿಂಗರಾಜು ಚಪ್ಪರದಹಳ್ಳಿ, ಕರೇಗೌಡ ಸಿದ್ಲಿಂಗಪ್ಪ ಸಣ್ಣಗೌಡ್ರ(ಮರಣೋತ್ತರ), ಆರ್.ಎಂ.ಹೆಗಡೆ ಬಾಳೇಸರ, ಶಂಭಲಿಂಗ ಗಣಪತಿ ಹೆಗಡೆ ನಡಗೋಡ, ಬಾಲಚಂದ್ರ ನಾಗಪ್ಪ ಮುಂಜಾನೆ, ಜಗದೇವಪ್ಪ ಇಂಡಿ, ಗುರುನಾಥ ರೆಡ್ಡಿ ಪರ್ವತರೆಡ್ಡಿ ಪಾಟೀಲ್, ಕೆ.ವೀರಣ್ಣ, ಎಲ್.ಎಸ್. ಆನಂದ್, ಡಾ.ಭೀಮಣ್ಣ ಖಂಡ್ರೆ, ಮಲ್ಲನಗೌಡ ಭೂಪನಗೌಡ ಪಾಟೀಲ್, ಬಸವೇಗೌಡ, ಎಚ್.ಡಿ.ರಮೇಶ್‌ಕಾಂತ್, ಎಸ್.ವಿ.ಬಸವರಾಜಪ್ಪ, ಪಿ.ರುದ್ರಪ್ಪ ಹಾಗೂ ಡಾ.ಡಿ.ಎನ್.ಹೆಗಡೆ ಅವರನ್ನು ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.