

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿ ತಿಂಗಳ ಮೇಲಾಯಿತು. ಇಂದಿಗೂ ಅವರ ಸಾವಿನ ಬಗ್ಗೆ ಚರ್ಚೆಯಾಗುತ್ತಲೇ ಇದೆ. ದಿನಕ್ಕೊಂದು ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ಇದೆಲ್ಲ ಒಂದು ಕಡೆಯಾದರೆ, ಸುಶಾಂತ್ ದುರಂತ ಅಂತ್ಯವನ್ನೇ ಸಿನಿಮಾ ಮಾಡುವ ಯೋಜನೆಯೂ ಬಾಲಿವುಡ್ನಲ್ಲಿ ನಡೆಯುತ್ತಿದೆ. ಅದರಂತೆ ಸೋಮವಾರ ಚಿತ್ರದ ಶೀರ್ಷಿಕೆ ಸಹ ಘೋಷಣೆಯಾಗಿದ್ದು, ‘ಸೂಸೈಡ್ ಔರ್ ಮರ್ಡರ್’ ಎಂದು ಅಂತಿಮ ಮಾಡಲಾಗಿದೆ.
ಅಂದಹಾಗೆ, ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ಪಾತ್ರವನ್ನು ನಿಭಾಯಿಸುವವರಾದರೂ ಯಾರು? ಹೀಗೊಂದು ಪ್ರಶ್ನೆಗೂ ಉತ್ತರ ಎಂಬಂತೆ ಹೊರಗಿನ ಮುಖವನ್ನೇ ಚಿತ್ರತಂಡ ಆಯ್ದುಕೊಂಡಿದೆ. ವಿಜಯ್ ಶೇಖರ್ ನಿರ್ಮಾಣ ಮಾಡಲಿರುವ ಈ ಚಿತ್ರದಲ್ಲಿ ಸಚಿನ್ ತಿವಾರಿ ನಾಯಕನಾಗಿ ನಟಿಸಲಿದ್ದು, ಸಚಿನ್ ಥೇಟ್ ಸುಶಾಂತ್ ಅವರನ್ನೇ ಹೋಲುತ್ತಿದ್ದಾರೆ.
ಇನ್ನು ಶಮಿಕ್ ಮೌಲಿಕ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಶ್ರದ್ಧಾ ಪಂಡಿತ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸಿನಿಮಾರಂಗದ ಹಿನ್ನೆಲೆ ಇಲ್ಲದೆ ಬಾಲಿವುಡ್ಗೆ ಬಂದ ಸುಶಾಂತ್ ಅವರ ಜೀವನದ ಕಥೆಯನ್ನೇ ಸಿನಿಮಾ ಮಾಡಲು ತಂಡ ನಿರ್ಧರಿಸಿದ್ದು, ಅದರಲ್ಲಿ ಆತ್ಮಹತ್ಯೆ ವಿಚಾರಕ್ಕೆ ಹೆಚ್ಚು ಒತ್ತು ನೀಡಲಿದ್ದಾರಂತೆ. ಸಿನಿಮಾ ಹಿನ್ನೆಲೆ ಇಲ್ಲದ ಸಚಿನ್ ತಿವಾರಿಗಿದು ಮೊದಲ ಸಿನಿಮಾ. ಅಕ್ಟೋಬರ್ ವೇಳೆಗೆ ಸಿನಿಮಾ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ. -ಏಜೆನ್ಸೀಸ್