

ನೆನಪಿರಲಿ ಸಿನಿಮಾದಿಂದಲೇ ಫೇಮಸ್ ಆಗಿರುವ ನಟ ಪ್ರೇಮ್ ಅವರು ಲಾಕ್ಡೌನ್ನಲ್ಲಿ ಭರ್ಜರಿ ವರ್ಕೌಟ್ ಮಾಡಿ, ದೇಹ ದಂಡನೆ ಮಾಡಿದ್ದಾರೆ. ಯಾವುದೇ ಸಿನಿಮಾ ಶೂಟಿಂಗ್ ಸದ್ಯ ನಡೆಯುತ್ತಿಲ್ಲ ಕಾರಣ ಮನೆಯಲ್ಲೇ ಪತ್ನಿ, ಮಕ್ಕಳೊಟ್ಟಿಗೆ ಆರಾಮಾಗಿ ಕಾಲಕಳೆಯುತ್ತಿದ್ದಾರೆ.
ನಿನ್ನೆ ಭೀಮನ ಅಮಾವಾಸ್ಯೆಯಂದು ಪತ್ನಿಯಿಂದ ಪಾದ ಪೂಜೆ ಮಾಡಿಸಿಕೊಂಡಿರುವ ಪ್ರೇಮ್ ಅವರು ಫೋಟೋ ಶೇರ್ ಮಾಡಿದ್ದಾರೆ. ಹಾಗೇ ಭಾವನಾತ್ಮಕವಾದ ಸಾಲುಗಳನ್ನೂ ಬರೆದಿದ್ದಾರೆ. ಇದನ್ನೂ ಓದಿ: ಲಾಕ್ಡೌನ್ ಸಮಯದಲ್ಲಿ ಪ್ರೇಮ್ ಎಷ್ಟು ಬದಲಾಗಿದ್ದಾರೆ ನೋಡಿ …
ನಿನ್ನ ಪ್ರೀತಿ ಮಾಡಿದ ಮೇಲೆ ನನ್ನ ಆಯಸ್ಸು ಜಾಸ್ತಿಯಾಯಿತು. ಮದುವೆ ಆದ ಮೇಲೆ ಅದೃಷ್ಟ ಖುಲಾಯಿಸಿತು. ಈಗ ಪಾದಪೂಜೆ ಮಾಡಿದ್ದೀಯಾ. ನನ್ಮಗಂದು ಇನ್ಮೇಲೆ ಜಾಕ್ಪಾಟ್....ಎಂದಿದ್ದಾರೆ.
ಈ ಮೂಲಕ ತಮ್ಮ ಬದುಕಿನ ಎಲ್ಲ ಬೆಳವಣಿಗೆಗಳಿಗೂ ಪತ್ನಿ ಜ್ಯೋತಿಯೇ ಕಾರಣ ಎಂಬುದಾಗಿ ಬಿಂಬಿಸಿದ್ದಾರೆ. ಜ್ಯೋತಿ ಮತ್ತು ಪ್ರೇಮ್ ಪರಸ್ಪರ ಪ್ರೀತಿಸಿ ಮದುವೆಯಾದವರು. ಇಬ್ಬರು ಮಕ್ಕಳ ಪಾಲಕರು.