

ನ್ಯೂಯಾರ್ಕ್: ಟೈಟಾನಿಕ್ ಸಿನಿಮಾದ ಮೂಲಕ ಜಗತ್ಪ್ರಸಿದ್ಧಿ ಪಡೆದಿರುವ ನಟಿಯೆಂದರೆ ಕೇಟ್ ವಿನ್ಸ್‌ಲೆಟ್. ಈ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಜಗತ್ತಿನ ಅತ್ಯಂತ ಪ್ರಭಾವಿ ನಟಿಯರ ಪಟ್ಟಿಯಲ್ಲೂ ಇವರು ಸೇರ್ಪಡೆಯಾದರು.
ಆಸ್ಕರ್ ಪ್ರಶಸ್ತಿ ಗೆದ್ದಿರೋ ಈ ನಟಿಯೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಲೀ' ಸಿನಿಮಾದ ಶೂಟಿಂಗ್ ವೇಳೆ ಚಿತ್ರೀಕರಣಕ್ಕಾಗಿ ನಿರ್ಮಿಸಿದ್ದ ಸೆಟ್‌ನಿಂದ ಕೆಳಗೆ ಬಿದ್ದಿದ್ದರಿಂದ ಅವರಿಗೆ ಪೆಟ್ಟಾಗಿದೆ. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗಿದೆ.
'ಲೀ' ಚಿತ್ರದಲ್ಲಿ ಕೇಟ್ ನಾಲ್ಕೈದು ವರ್ಷಗಳಿಂದಲೂ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಬೃಹತ್ ಸೆಟ್ ಹಾಕಲಾಗಿತ್ತು. ಈ ಸೆಟ್‌ನಿಂದ ಆಯ ಪಟ್ಟಿ ನಟಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎತ್ತರದ ಪ್ರದೇಶದಿಂದ ಕೆಳಗೆ ಬಿದ್ದಿದ್ದರಿಂದ ಬಲವಾದ ಪೆಟ್ಟು ಬಿದ್ದಿವೆ ಎಂದು ಹೇಳಲಾಗುತ್ತಿದೆ.
ಅಮೆರಿಕದ ಖ್ಯಾತ ಮಹಿಳಾ ಫೋಟೋ ಜರ್ನಲಿಸ್ಟ್ ಎಲಿಜಬೆತ್ ಲೀ ಮಿಲ್ಲರ್ ಬಯೋಪಿಕ್ ಲೀ ಚಿತ್ರವಾಗಿದ್ದು, ಕೇಟ್ ಅವರು ಎಲಿಜಬೆತ್ ಲೀ ಆಗಿ ಕಾಣಿಸಿಕೊಳ್ಳಲಿದ್ದಾರೆ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಎಲಿಜಬೆತ್ ಲೀ ವಹಿಸಿದ್ದ ಮಹತ್ವದ ಪಾತ್ರದ ಕುರಿತು ಈ ಚಿತ್ರದಲ್ಲಿ ವಿವರಿಸಲಾಗಿದೆ. ಕೇಟ್ ವಿನ್ಸ್‌ಲೆಟ್ ಜೊತೆಯಾಗಿ ಮಾರಿಂನ್ ಕೋಟಿಲಾರ್ಟ್, ಜ್ಯೂಡ್ ಲಾ ಸೇರಿದಂತೆ ಹಾಲಿವುಡ್ ದಿಗ್ಗಜರು ನಟಿಸುತ್ತಿದ್ದಾರೆ.
1997ರಲ್ಲಿ ತೆರೆಕಂಡ ಟೈಟಾನಿಕ್ ಸಿನಿಮಾ ಮೂಲಕ ಜಗತ್ತಿನ ಸಿನಿಮಾ ಪ್ರೇಮಿಗಳಿಗೆ ಪರಿಚಯವಾದ ಕೇಟ್, ಆನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಟೈಟಾನಿಕ್ ಸಿನಿಮಾ ಅವರ ಅದೃಷ್ಟವನ್ನೇ ಬದಲಿಸಿದ ಚಿತ್ರ. (ಏಜೆನ್ಸೀಸ್)