40ರ ಹರೆಯದ ನಟಿ ಅನುಷ್ಕಾಗೆ ಕೂಡಿಬಂತು ಕಂಕಣ ಭಾಗ್ಯ: ಆದರೆ ಆತ ಸುದ್ದಿ ಮಾಡಿದವನಲ್ಲ!

anushka
Published on

ಹೈದರಾಬಾದ್​: ರಾವಳಿಯ ಬ್ಯೂಟಿ ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ವಯಸ್ಸು ನಲವತ್ತಾದರೂ ಇಂದಿಗೂ ಅದೇ ಚಮಕ್​ ಉಳಿಸಿಕೊಂಡಿರುವ ಸುಂದರಿ ಅನುಷ್ಕಾ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಅರುಂಧತಿ, ಭಾಗಮತಿ, ಬಾಹುಬಲಿಯಂಥ ಸೂಪರ್ ಹಿಟ್​ ಸಿನಿಮಾಗಳನ್ನ ಕೊಟ್ಟಿರುವ ಅನುಷ್ಕಾ ಸದ್ಯ ನವೀನ್ ಪೋಲಿ ಶೆಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ನಡುವೆಯೇ ಅವರ ಮದುವೆ ಸುದ್ದಿ ಸದ್ದು ಮಾಡುತ್ತಿದೆ. ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ಅವರ ಕುಟುಂಬದ ಮೂಲಗಳಿಂದ ತಿಳಿದು ಬರಬೇಕಿದೆ.

ಹೀಗೆಂದು ವಿಷಯ ತಿಳಿಯುತ್ತಿದ್ದಂತೆಯೇ ಇವರ ಅಭಿಮಾನಿಗಳ ಕಣ್ಣಿಗೆ ಬರುವುದು ನಟ ಪ್ರಭಾಸ್​! ಏಕೆಂದರೆ ಹಲವು ವರ್ಷಗಳು ಇವರು ಜತೆಯಾಗಿಯೇ ಓಡಾಟ ನಡೆಸುತ್ತಿದ್ದರಿಂದ ಇಬ್ಬರೂ ಮದುವೆಯಾಗುತ್ತಾರೆ ಎಂದೇ ಸುದ್ದಿಯಾಗಿತ್ತು.

ಬಾಹುವಲಿ, ಬಿಲ್ಲಾ, ಮಿರ್ಚಿ ಸೇರಿದಂತೆ ಕೆಲವು ಸೂಪರ್​ಹಿಟ್​ ಚಿತ್ರಗಳಲ್ಲಿ ಈ ಜೋಡಿ ನಟಿಸಿ, ಅಭಿಮಾನಿಗಳ ಮನ ಗೆದ್ದಿತ್ತು. ನಂತರ ಇವರಿಬ್ಬರ ಓಡಾಟವೂ ಜೋರಾಗಿಯೇ ನಡೆದಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದಾಗ, ಅನುಷ್ಕಾ, 'ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್, ನಮ್ಮ ನಡುವೆ ಲವ್ ಇಲ್ಲ' ಎಂದು ಹೇಳಿದ್ದರೂ ಅಭಿಮಾನಿಗಳು ನಂಬಿರಲಿಲ್ಲ.

ಆದರೆ ಈಗ ನಂಬದೇ ಇರುವ ಅಭಿಮಾನಿಗಳಿಗೆ ಅನುಷ್ಕಾ ಶಾಕ್​ ನೀಡಿದ್ದಾರೆ. ಏಕೆಂದರೆ, ನಿಜಕ್ಕೂ ಅವರು ಪ್ರಭಾಸ್​ರನ್ನು ಮದುವೆಯಾಗುತ್ತಿಲ್ಲ. ಬದಲಿಗೆ ಅನುಷ್ಕಾ ಶೆಟ್ಟಿ ಹೈದರಾಬಾದ್​ ಮೂಲದ ಖ್ಯಾತ ಚಿನ್ನದ ಉದ್ಯಮಿಯ ಕೈಹಿಡಿಯುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಅವರ ಬಗ್ಗೆ ಇನ್ನಷ್ಟೇ ಹೆಚ್ಚಿನ ವಿವರ ಬರಬೇಕಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net