'RRR' ಟ್ರೈಲರ್ ಮುರಿದ ದಾಖಲೆಗಳು: ರಾಜಮೌಳಿ ಸಿನಿಮಾ ಎಂದರೆ ಸಾಕು, ಅಭಿಮಾನಿಗಳಿಗೆ ನಿದ್ದೆ ಬರಲ್ಲ. ಏಕೆಂದರೆ, ರಾಜಮೌಳಿಯ ಸಿನಿ ಕರಿಯರ್ನ ಟ್ರ್ಯಾಕ್ ಅಂತಹದ್ದು. ಸ್ಟೂಡೆಂಟ್ ನಂ 1, ಸಿಂಹಾದ್ರಿ, ಛತ್ರಪತಿ, ವಿಕ್ರಮಾರ್ಕುಡು, ಯಮದೊಂಗ, ಮರ್ಯಾದಾ ರಾಮನ್ನ, ಮಗಧೀರ, ಈಗಾ, ಬಾಹುಬಲಿ, ಬಾಹುಬಲಿ-2 ದಂತಹ ಉತ್ತಮ ಸಿನಿಮಾಗಳನ್ನು ಸಿನಿಪ್ರೇಕ್ಷಕರಿಗೆ ನೀಡಿದ ರಾಜಮೌಳಿಗೆ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡಬೇಕು ಎನ್ನುವ ಒತ್ತಾಯ ಆರಂಭವಾಗಿತ್ತು. ಅದು, ರಾಜಮೌಳಿಗೆ ಇರುವ ಡಿಮ್ಯಾಂಡ್. ಹೀಗುರುವಾಗ, ರಾಜಮೌಳಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ, 400 ಕೋಟಿಯ ಬಜೆಟ್, ಸ್ವಾತಂತ್ರ್ಯ ಪೂರ್ವದ ಕಥೆ ವಿತ್ ಫಿಕ್ಷನ್ ಟಚ್, ಬಹು ತಾರಾಗಣ ಎಂಬ ಹಲವು ಸ್ಪೆಷಲ್ ಅಂಶಗಳನ್ನು ಹೊಂದಿರುವ 'RRR' ಸಿನಿಮಾದ ಮೇಲೆ ಸಹಜವಾಗಿಯೇ ನಿರೀಕ್ಷೆಗಳು ತುಂಬಾನೆ ಇದ್ದವು. ಹಾಗಾಗಿ, ಕಣ್ಣ ಮೇಲೆ ರೆಪ್ಪೆ ಹಾಕದೆ ಈ ಸಿನಿಮಾದ ಟ್ರೈಲರ್ ನೋಡಲು ಕಾದಿದ್ದ ಅಭಿಮಾನಿಗಳು ಬಿಡುಗಡೆಯಾದ ತಕ್ಷಣ ಕುತೂಹಲದಿಂದ ನೋಡಿದ್ದಾರೆ. ಇದರಿಂದ 'RRR' ಸಿನಿಮಾ ಟ್ರೈಲರ್ ಒಂದಿಷ್ಟು ದಾಖಲೆಗಳನ್ನು 24 ಗಂಟೆಗಳಲ್ಲಿ ಉಡೀಸ್ ಮಾಡಿದೆ. ಹಾಗಾದರೆ, 'RRR' ಟ್ರೈಲರ್ ಮುರಿದ ದಾಖಲೆಗಳ ಪಟ್ಟಿ ಹೇಗಿದೆ?