'ರಾಧೇ ಶ್ಯಾಮ್​' ಬಿಡುಗಡೆಗೆ 'ಆರ್​ಆರ್​ಆರ್​' ಫಾರ್ಮುಲ ...

Radhe Shyam - Final
Published on

ಹೈದರಾಬಾದ್: ಟಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳ ಪೈಕಿ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೇ ಶ್ಯಾಮ್​' ಚಿತ್ರ ಸಹ ಒಂದು. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಎಲ್ಲಾ ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಯಲ್ಲಿ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ಹೊಸ ವಿಷಯವೇನೆಂದರೆ, ಈ ಚಿತ್ರದ ಡಿಜಿಟಲ್​ ಹಕ್ಕುಗಳನ್ನು 'ಆರ್​ಆರ್​ಆರ್​' ಫಾರ್ಮುಲದಲ್ಲಿ ಮಾರಾಟ ಮಾಡಲಾಗಿದೆ. ಇಷ್ಟಕ್ಕೂ ಏನಿದು 'ಆರ್​ಆರ್​ಆರ್​' ಫಾರ್ಮುಲ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಸಾಮಾನ್ಯವಾಗಿ, ಒಂದು ಚಿತ್ರದ ಡಿಜಿಟಲ್​ ಹಕ್ಕುಗಳನ್ನು ಒಂದು ಓಟಿಟಿಗೆ ಮಾರಾಟ ಮಾಡಲಾಗುತ್ತದೆ. ಆದರೆ, 'ಆರ್​ಆರ್​ಆರ್​' ಚಿತ್ರದ ಡಿಜಿಟಲ್​ ಹಕ್ಕುಗಳನ್ನು ಎರಡು ಓಟಿಟಿಗಳಿಗೆ ಮಾರಾಟ ಮಾಡಲಾಗಿದೆ.

ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಬರಬಹುದು. ಅದು ಹೇಗೆ ಎಂದರೆ, 'ಆರ್​ಆರ್​ಆರ್​' ಚಿತ್ರದ ಹಿಂದಿ ಡಿಜಿಟಲ್​ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ಗೆ ಮಾರಲಾಗಿತ್ತು. ಮಿಕ್ಕಂತೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಅವತರಣಿಕೆಗಳ ಡಿಜಿಟಲ್​ ಹಕ್ಕುಗಳನ್ನು ಜೀ5ಗೆ ಮಾರಾಟ ಮಾಡಲಾಗಿತ್ತು.

ಅದೇ ರೀತಿ, ಇದೀಗ 'ರಾಧೇ ಶ್ಯಾಮ್​' ಚಿತ್ರದ ಡಿಜಿಟಲ್​ ಹಕ್ಕುಗಳನ್ನು ಸಹ ಮಾರಾಟ ಮಾಡಲಾಗಿದೆಯಂತೆ. 'ರಾಧೇ ಶ್ಯಾಮ್​'ನ ಹಿಂದಿ ಅವತರಣಿಕೆಯನ್ನು ನೆಟ್​ಫ್ಲಿಕ್ಸ್​ ಪಡೆದರೆ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನ ಹಕ್ಕುಗಳನ್ನು ಜೀ5 ಪಡೆದಿದೆ ಎಂದು ಹೇಳಲಾಗುತ್ತಿದೆ. ಈ ಐದು ಭಾಷೆಗಳ ಹಕ್ಕುಗಳು ಎಷ್ಟಕ್ಕೆ ಮಾರಾಟವಾಗಿರಬಹುದು ಎಂಬ ಪ್ರಶ್ನೆ ಬರಬಹುದು. ಆ ವಿಷಯವನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಸದ್ಯಕ್ಕೆ ರಹಸ್ಯವಾಗಿಟ್ಟು, ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

'ರಾಧೇ ಶ್ಯಾಮ್​' ಚಿತ್ರದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದುಮ ರಾಧಾಕೃಷ್ಣ ಕುಮಾರ್​ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net