ವಜ್ರಮುನಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಾಕ್​ಲೈನ್ ವೆಂಕಟೇಶ್

vajramuni
Published on

ಬೆಂಗಳೂರು: ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ವಜ್ರಮುನಿಗೆ ಹೋಲಿಸಿದ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಬಗ್ಗೆ ವಜ್ರಮುನಿ ಅಭಿಮಾನಿಗಳು ಮುನಿಸಿಕೊಂಡಿದ್ದು, ಈ ವಿಚಾರವಾಗಿ ವೆಂಕಟೇಶ್ ಕ್ಷಮೆ ಕೇಳಿದ್ದಾರೆ. ನಾನು ಹೇಳಿದ್ದು ಒಳ್ಳೆಯ ಅರ್ಥದಲ್ಲಿ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ನನ್ನ ಹೇಳಿಕೆಯಿಂದ ವಜ್ರಮುನಿ ಅಭಿಮಾನಿಗಳಿಗೆ ಬೇಸರ ಆಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನಾನು ಹೇಳಿದ್ದು ವಜ್ರಮುನಿ ಮಹಾನ್ ನಟ ಎನ್ನುವ ಅರ್ಥದಲ್ಲಿ. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಚಿತ್ರರಂಗದಲ್ಲಿ ಒಳ್ಳೆಯವರ ಗುಂಪಿನಲ್ಲಿ ವಜ್ರಮುನಿ ಕೂಡ ಇದ್ದಾರೆ. ಅವರ ಮನಸ್ಸು ತುಂಬಾ ಒಳ್ಳೆಯದು. ಆ ಅರ್ಥದಲ್ಲಿ ನಾನು ರವೀಂದ್ರ ಶ್ರೀಕಂಠಯ್ಯಗೆ ಹೇಳಿದ್ದು. ರವೀಂದ್ರ ಶ್ರೀಕಂಠಯ್ಯ ನನ್ನ ಆತ್ಮೀಯ ಸ್ನೀಹಿತ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಬೇರ ಅರ್ಥದಲ್ಲಿ ನಾನು ಹೇಳಿಲ್ಲ ಎಂದು ರಾಕ್​ಲೈನ್ ವೆಂಕಟೇಶ್ ಹೇಳಿದ್ದಾರೆ.

ಈ ಹಿಂದೆ ಅಂಬಿ ಇದ್ದಾಗ ರವೀಂದ್ರ ಶ್ರೀಕಂಠಯ್ಯನವರು ಮುಂಗಾರು ಮಳೆ ಗಣೇಶ್ ರೀತಿ ಇದ್ರು, ಈಗ ವಜ್ರಮುನಿ ತರ ಆಗಿದ್ದಾರೆ ಎಂದು ರಾಕ್​ಲೈನ್ ವೆಂಕಟೇಶ್ ಹೇಳಿಕೆ ನೀಡಿದ್ದರು. ಇದಕ್ಕೆ ರವೀಂದ್ರ ಶ್ರೀಕಂಠಯ್ಯನವರು ಕೂಡ ಮಾತಿನ ತಿರುಗೇಟು ಕೊಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net