ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಮದ್ಯದ ಬಾಟಲ್ ಎಸೆದು ದಾಳಿ

rockline home
Published on

ಬೆಂಗಳೂರು: ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ನಿಂತಿರುವ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಕಿಡಿಗೇಳಿಗಳು ದಾಳಿ ನಡೆಸಿದ್ದಾರೆ. ತಡ ರಾತ್ರಿಯಲ್ಲಿ ಬೈಕ್​ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಮದ್ಯದ ಬಾಟಲ್​ಗಳನ್ನು ಮನೆಗೆ ಎಸೆದು ದಾಳಿ ನಡೆಸಿರುವುದಾಗಿ ಹೇಳಲಾಗಿದೆ.

ಈ ವಿಚಾರ ಇಲ್ಲಿಯವರೆಗೆ ಹೋಗುತ್ತದೆ ಎಂದು ಗೊತ್ತಿರಲಿಲ್ಲಿ. ನಾವು ಸುಮ್ಮನಿದ್ದರೂ ನಮ್ಮನ್ನ ಟಾರ್ಗೆಟ್ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ವೆಂಕಟೇಶ್ ಈ ವಿಚಾರದಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.

ದಾಳಿ ವಿಚಾರದಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ಲಿಖಿತ ದೂರನ್ನು ಠಾಣೆಗೆ ಬಂದು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲಸಿಕೊಂಡು ತನಿಖೆ ಮಾಡುತ್ತೇವೆ. ಮುಂಜಾಗ್ರತೆ ಹಿನ್ನಲೆಯಲ್ಲಿ ಮನೆಯ ಬಳಿ ಇಬ್ಬರು ಪೊಲೀಸರ ನಿಯೋಜನೆ ಮಾಡಲಾಗಿದೆ. ಇದುವರೆಗೂ ಯಾರನ್ನು ನಾವು ಬಂಧನ ಮಾಡಿಲ್ಲ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net