

ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಕ್ರಿಕೆಟಿಗ ವಿರಾಟ್ ಕೋಹ್ಲಿ ಅವರ ಪುಟ್ಟ ಮಗಳು ವಮಿಕಾಗೆ 6 ತಿಂಗಳು ಪೂರೈಸಿದೆ. ಕಳೆದ ಜನವರಿ 11 ರಂದು ಜನಿಸಿದ ಬೇಬಿ ವಮಿಕಾಳ 6 ನೇ ತಿಂಗಳ ಹುಟ್ಟಿದಹಬ್ಬವನ್ನು ವಿರುಷ್ಕಾ ದಂಪತಿಯು, ಇಂಗ್ಲೆಂಡಿನ ಪಾರ್ಕೊಂದಕ್ಕೆ ಪಿಕ್ನಿಕ್ ಕರೆದುಕೊಂಡು ಹೋಗಿ ಆಚರಿಸಿದ್ದಾರೆ.
ಮಗುವಿನೊಂದಿಗೆ ಅನುಷ್ಕಾ ಮತ್ತು ವಿರಾಟ್ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ಝಲಕ್ ನೀಡುವ ಚಿತ್ರಗಳನ್ನು ಅನುಷ್ಕಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. "ಅವಳ ಒಂದು ನಗೆ ನಮ್ಮ ಸುತ್ತಲ ಜಗತ್ತನ್ನು ಬದಲಾಯಿಸಬಲ್ಲದು!" ಎಂದು ಟಿಪ್ಪಣಿ ಬರೆದಿರುವ ಅನುಷ್ಕಾ, "ಹ್ಯಾಪಿ 6 ಮಂತ್ಸ್ ಟು ಅಸ್ ತ್ರೀ!" ಎಂದಿದ್ದಾರೆ.
ಜೂನ್ನಲ್ಲಿ ವರ್ಲ್ಡ್ ಚಾಂಪಿಯನ್ಶಿಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಇಂಗ್ಲೆಂಡಿಗೆ ಹೋಗಬೇಕಾದರೆ, ಪತ್ನಿ ಮತ್ತು ಪುತ್ರಿಯನ್ನೂ ಕೊಹ್ಲಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ, ಸಾಮಾಜಿಕ ಮಾಧ್ಯಮದಲ್ಲಿ ಮಗುವಿನ ಮುಖವನ್ನು ಜಾಹೀರುಗೊಳಿಸದಿರುವ ನಿರ್ಧಾರವನ್ನು ವಿರುಷ್ಕಾ ದಂಪತಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)