ಬಿಗ್‌ಸ್ಕ್ರೀನ್‌ನಲ್ಲಿ ರಿತ್ವಿಕ್ ಉತ್ಸವ; ಗಿಣಿರಾಮ ಹುಡುಗನಿಗೆ ಪೂರ್ವಿ ಜೋಷಿ ನಾಯಕಿ

utsava
Published on

ಬೆಂಗಳೂರು: ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ಮಿಂಚಿರುವ ಹಲವು ನಟ, ನಟಿಯರಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಅವರಿಂದ ಹಿಡಿದು ಈಗ ಚಂದನ್, ವಿಜಯ್ ಸೂರ್ಯ, ಡಾರ್ಲಿಂಗ್ ಕೃಷ್ಣ, ಕಿರಣ್ ರಾಜ್, ದಕ್ಷ್, ಮೇಘಾ ಶೆಟ್ಟಿ, ವೈಷ್ಣವಿ ಸೇರಿ ಹಲವು ಕಿರುತೆರೆ ಸ್ಟಾರ್‌ಗಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. ಆ ಸಾಲಿನಲ್ಲಿ ‘ಗಿಣಿರಾಮ’ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ್ ಕೂಡ ಸೇರಿಕೊಂಡಿದ್ದಾರೆ.

ಈ ಹಿಂದೆ ‘ಆ ಎರಡು ವರ್ಷಗಳು’, ‘ಗ್‌ಟಿ ಬಾಕ್ಸ್’ ಚಿತ್ರಗಳಲ್ಲಿ ನಟಿಸಿರುವ ರಿತ್ವಿಕ್ ಇದೀಗ ‘ಉತ್ಸವ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನಾಗೇಂದ್ರ ಅರಸ್ ಸೇರಿ ಹಲವು ನಿರ್ದೇಶಕರ ಗರಡಿಯಲ್ಲಿ ಸಹಾಯಕ, ಸಹ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದಿರುವ ಅರುಣ್ ಸೂರ್ಯ ನಿರ್ದೇಶಿಸುತ್ತಿರುವ ಮೊದಲ ಚಿತ್ರ ‘ಉತ್ಸವ’. ರಿತ್ವಿಕ್‌ಗೆ ‘ೇಸ್ ಟು ೇಸ್’ ನಾಯಕಿ ಪೂರ್ವಿ ಜೋಷಿ ನಾಯಕಿಯಾಗಿದ್ದಾರೆ.

ಉಳಿದಂತೆ ನಾಗೇಂದ್ರ ಅರಸ್, ಪ್ರಕಾಶ್ ತುಮ್ಮಿನಾಡು ಪ್ರಮುಖ ತಾರಾಗಣದಲ್ಲಿದ್ದಾರೆ. ಇದೊಂದು ಪ್ರೇಮಕಥಾ ಹಂದರವಿರುವ ಚಿತ್ರವಾಗಿದ್ದು, ಈಗಾಗಲೇ ಮನಾಲಿ, ಗೋವಾದಲ್ಲಿ ಶೂಟಿಂಗ್ ಪೂರ್ಣಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net