ಈ ವಿಡಿಯೋ ನೋಡಿ ನಿಮ್ಮ ಕಣ್ಣು ಒದ್ದೆಯಾಗೋದು ಗ್ಯಾರಂಟಿ!

Riteish Deshmukh
Published on

ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಮಧ್ಯಾಹ್ನದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಏನ್ ಗೊತ್ತಾ? ಅವರೇ ಬಿಡುಗಡೆ ಮಾಡಿರುವ ಒಂದು ವಿಡಿಯೋ.

ಇಂದು ರಿತೇಶ್ ತಂದೆ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್ ಅವರ ಹುಟ್ಟುಹಬ್ಬ. ಅವರು ಬದುಕಿರುತ್ತಿದ್ದರೆ, ಇಂದಿಗೆ ಅವರಿಗೆ 75 ವರ್ಷವಾಗುತಿತ್ತು. ಈ ನೆನಪಲ್ಲಿ ರಿತೇಶ್ ಒಂದು ವಿಡಿಯೋ ಮಾಡಿದ್ದಾರೆ.

ಈ ವಿಡಿಯೋದಲ್ಲಿ ರಿತೇಶ್ ಮೊದಲಿಗೆ, ಹ್ಯಾಂಗರ್‌ಗೆ ನೇತುಹಾಕಿರುವ ತಮ್ಮ ತಂದೆಯ ಬಟ್ಟೆಗಳನ್ನು ದಿಟ್ಟಿಸಿ ನೋಡುತ್ತಾರೆ. ನಂತರ ಅದರೊಳಗೆ ಬಲತೋಳಿಗೆ ತಮ್ಮ ಬಲಗೈಯನ್ನು ಹಾಕಿ, ತಮ್ಮ ಎಡತೋಳನ್ನು ತಬ್ಬಿ ಹಿಡಿಯುತ್ತಾರೆ. ದೂರದಿಂದ ಅದು ತಂದೆ-ಮಗನನ್ನು ಆಲಂಗಿಸಿಕೊಂಡಂತೆ ಕಾಣುತ್ತದೆ. ಹಿನ್ನೆಲ್ಲೆಯಲ್ಲಿ ‘ಅಗ್ನಿಪಥ್’ ಚಿತ್ರದ ‘ಅಭಿ ಮುಜೆ ...’ ಎಂಬ ಎಮೋಷನಲ್ ಆದಂತಹ ಹಾಡು ಕೇಳಿ ಬಂದು, ನೋಡುಗರ ಕಣ್ಣು ತೇವವಾಗುತ್ತದೆ.

ಟಿಕ್‌ಟಾಕ್ ಮೂಲಕ ಮಾಡಿದ ಈ ವಿಡಿಯೋವನ್ನು ರಿತೇಶ್, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಪ್ಪನನ್ನು ನೆನಪಿಸಿಕೊಳ್ಳುತ್ತಾ, ‘ಮಿಸ್ ಯೂ ಪಪ್ಪಾ ...’ ಎಂದು ಬರೆದುಕೊಂಡಿದ್ದರು. ಅವರ ಈ ಪೋಸ್ಟ್‌ಗೆ ಜನ ಸಾಮಾನ್ಯರಷ್ಟೇ ಅಲ್ಲ, ಹಲವು ಸೆಲೆಬ್ರಿಟಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ. ಶತ್ರುಘ್ನ ಸಿನ್ಹಾ, ಅಭಿಷೇಕ್ ಬಚ್ಚನ್, ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net