More

    ಮಹಿಳೆಯ ಉಗುರಿನಲ್ಲೂ ‘ಕೆಜಿಎಫ್​’ ಕ್ರೇಜ್​!

    ‘ಕೆಜಿಎಫ್ ಚಾಪ್ಟರ್ 2’ ಬಗ್ಗೆ ಸದ್ಯ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಸಿನಿಮಾ ಬಿಡುಗಡೆ ಬಗ್ಗೆಯೂ ದಿನಾಂಕ ಘೋಷಣೆ ಆಗಿರುವುದರಿಂದ ಸಹಜ ಕುತೂಹಲ ಮನೆ ಮಾಡಿದೆ. ಹೀಗಿರುವಾಗಲೇ ಅಭಿಮಾನಿ ಬಳಗ ಒಂದಲ್ಲ ಒಂದು ರೀತಿ ಸಿನಿಮಾವನ್ನು ನೆನಪಿಸಿಕೊಳ್ಳುತ್ತಿದೆ. ಅದರಂತೆ ಇದೀಗ ದೆಹಲಿಯ ನೇಲ್​ ಪಾಲಿಷ್ ಆರ್ಟಿಸ್ಟ್​ವೊಬ್ಬರು ವಿಭಿನ್ನ ರೀತಿಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಬಗೆಗಿನ ತಮ್ಮ ಅಭಿಮಾನವನ್ನು ಹೊರಹಾಕಿದ್ದಾರೆ. ಉಗುರಿನಲ್ಲಿಯೇ ರಾಕಿಭಾಯ್​ ಫೋಟೋ ಚಿತ್ರಿಸಿಕೊಂಡು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದೇನೆ ಎಂದಿದ್ದಾರೆ.

    ಇದನ್ನೂ ಓದಿ: ರಂಜಾನ್​ ಪ್ರಯುಕ್ತ ಸಲ್ಮಾನ್​ ಕಡೆಯಿಂದ 5 ಸಾವಿರ ಕುಟುಂಬಗಳಿಗೆ ವಿಶೇಷ ಗಿಫ್ಟ್​!

    ಹೌದು, ‘ಕೆಜಿಎಫ್​ ಚಾಪ್ಟರ್ 1’ ಚಿತ್ರದ ಮೊದಲ ಲುಕ್​ ಬಿಡುಗಡೆ ಬಳಿಕ ಜಾಲತಾಣದಲ್ಲಿ ಯಶ್​ ಲುಕ್​ ವೈರಲ್ ಆಗಿತ್ತು. ಟ್ರೇಲರ್ ನೋಡಿ, ಯಶ್​ ಅವರಂತೆ ಗಡ್ಡ ಬಿಟ್ಟು ಫೋಟೋ ಹಂಚಿಕೊಳ್ಳುತ್ತಿದ್ದರು. ಸಿನಿಮಾ ಬಂದ ಮೇಲಂತೂ, ಟಿಕ್​ಟಾಕ್​ನಲ್ಲಿ ‘ಕೆಜಿಎಫ್​’ ಹವಾ ಸೃಷ್ಟಿಸಿತ್ತು. ಅದೇ ರೀತಿ ಚಾಪ್ಟರ್ 2ರ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳಿರುವುದರಿಂದ ಆ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ಹೊರಹಾಕುತ್ತಿದ್ದಾರೆ.

    ಮಹಿಳೆಯ ಉಗುರಿನಲ್ಲೂ ‘ಕೆಜಿಎಫ್​’ ಕ್ರೇಜ್​!

    ಇದನ್ನೂ ಓದಿ: ಕರಣ್​ ಜೋಹರ್​ಗೂ ಕರೊನಾ ಕಂಟಕ!

    ದೆಹಲಿ ಮೂಲದ ರಿದಮ್​ ಅಹುಲ್ವಾಲಿಯಾ ತಮ್ಮ ಉಗುರಿನಲ್ಲಿ ನೇಲ್​ ಪಾಲಿಷ್​ ಬಳಸಿ ಯಶ್​ ಚಿತ್ರ ಬಿಡಿಸಿಕೊಂಡು, ಟ್ವಿಟರ್ ಪೇಜ್​ನಲ್ಲಿ ಶೇರ್ ಮಾಡಿದ್ದಾರೆ. ‘ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಯಾರೆಲ್ಲ ಕಾಯುತ್ತಿದ್ದೀರಿ? ಮೊದಲ ಭಾಗದ ನಿರ್ದೇಶನ ಮತ್ತು ಅದು ಮೂಡಿ ಬಂದ ರೀತಿ, ಪ್ರತಿ ದೃಶ್ಯವೂ ಗೂಸ್​ಬಂಪ್ಸ್ ಬರುವಂತಿತ್ತು’ ಎಂದು ಫೋಟೋಗೆ ಕ್ಯಾಪ್ಶನ್​ ನೀಡಿದ್ದಾರೆ.
    ಸದ್ಯ ಬಹುತೇಕ ಚಿತ್ರೀಕರಣದ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ, ಹಾಡುಗಳ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಅಕ್ಟೋಬರ್​ 23ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದ್ದು, ಶೀಘ್ರದಲ್ಲಿ ಅಭಿಮಾನಿಗಳಿಗೆ ಚಿತ್ರದ ಬಗೆಗಿನ ಮತ್ತಷ್ಟು ಅಪ್​ಡೇಟ್​ ಮಾಹಿತಿ ಲಭ್ಯವಾಗಲಿದೆ.

    ಫೋಟೋದಲ್ಲಿರೋ ಬಾಲಕಿ ಬಾಲಿವುಡ್​ನ ಬೋಲ್ಡ್​ ಬ್ಯೂಟಿ: ಈಕೆಗಿದೆ ಕರ್ನಾಟಕದ ನಂಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts