ತಂತ್ರಜ್ಞಾನ ಹೇಗ್ಹೇಗೆ ಮುಂದುವರೆಯುತ್ತಿದೆಯೋ, ಹಾಗೆಯೇ ಆ ತಂತ್ರಜ್ಞಾನವನ್ನು ಬಳಸಿ ಮೋಸ ಮಾಡುವವರ ಸಂಖ್ಯೆಯೂ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಜನ ಸಾಮಾನ್ಯರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಆನ್ಲೈನ್ ಹಾಗೂ ಆಫ್ಲೈನ್ ಮೋಸಗಳು ಆಗುತ್ತಲೇ ಇದ್ದಾವೆ. ಇದೀಗ, ಖ್ಯಾತ ನಟಿಯೊಬ್ಬರೂ ಈ ರೀತಿ ಮೋಸ ಹೋಗಿದ್ದಾರೆ ಎಂದರೇ ನೀವು ನಂಬಲೇ ಬೇಕು. ಹೌದು, ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತೀರಿ ಎಂದಾದರೆ ಅದಕ್ಕೆ ಸಾಕಷ್ಟು ಅಧ್ಯಯನ ಬೇಕು. ಆದರೆ, ಅನೇಕರು ಒಂದೇ ಬಾರಿಗೆ ಹೆಚ್ಚು ಲಾಭ ಬರುತ್ತದೆ ಎಂಬ ಆಸೆಯಿಂದ ಹಲವು ಬಾರಿ ಮೋಸ ಹೋಗುತ್ತಾರೆ.