

‘ಬೈರಾಗಿ’ ಚಿತ್ರದಲ್ಲೊಂದು ವಿಶೇಷ ಹಾಡಿದೆ, ಒಂದೇ ಟೇಕ್ನಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ ಎಂಬ ಸುದ್ದಿಯೊಂದು ವರ್ಷದ ಆರಂಭದಲ್ಲಿ ಕೇಳಿ ಬಂದಿತ್ತು. ಈ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಶೇಷವೇನು ಗೊತ್ತಾ? ಈ ಹಾಡಿಗೆ ಶಿವರಾಜಕುಮಾರ್ ಮತ್ತು ಶರಣ್ ಇಬ್ಬರೂ ಧ್ವನಿಯಾಗಿದ್ದಾರೆ. ‘ವಜ್ರಕಾಯ’ ಚಿತ್ರದಲ್ಲೇ ಶಿವರಾಜಕುಮಾರ್ಗೆ ‘ತೂಕಟ ಗಡಬಡ’ ಎಂಬ ಹಾಡನ್ನು ಹಾಡಿದ್ದರು ಶರಣ್. ಈಗ ‘ಸಂಡೆ ಮಂಡೆ ಎವರಿಡೇ ... ಲವ್ವಿಗಿಲ್ಲ ಹಾಲಿಡೇ ...’ ಎಂಬ ಹಾಡಿಗೆ ಶಿವರಾಜಕುಮಾರ್ ಮತ್ತು ಶರಣ್ ಇಬ್ಬರೂ ಧ್ವನಿಯಾಗಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿರುವ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.
‘ರಿದಮ್ ಆಫ್ ಶಿವಪ್ಪ’ ಎಂಬ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಹಾಡನ್ನು ಒಂದೇ ಟೇಕ್ನಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡನ್ನು ದೇವನಹಳ್ಳಿ ಬಳಿ ಇರುವ ಹೊಸ ಮಾಲ್ವೊಂದರಲ್ಲಿ ಚಿತ್ರೀಕರಣ ಮಾಡಲಾಗಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಶಿವರಾಜಕುಮಾರ್ ಅಲ್ಲದೆ, ಧನಂಜಯ್, ಪೃಥ್ವಿ ಅಂಬರ್, ಯಶಾ ಶಿವಕುಮಾರ್, ಚಿಕ್ಕಣ್ಣ ಮುಂತಾದವರು ಹೆಜ್ಜೆ ಹಾಕಿದ್ದಾರೆ.
ಈ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬ್ನ ಜೆಪಿ ಮ್ಯೂಸಿಕ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ‘ಬೈರಾಗಿ’ ಚಿತ್ರವು ಜುಲೈ ಒಂದರಂದು ರಾಜ್ಯಾದ್ಯಂತ ಬಿಡಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶಿಸಿದ್ದು, ಕೃಷ್ಣ ಸಾರ್ಥಕ್ ನಿರ್ವಿುಸಿದ್ದಾರೆ.