ಮಹೇಶ್ ಭಟ್ ತನ್ನ ತಂದೆ ಸಮಾನ ಎಂದ ರಿಯಾ ...

Mahesh Bhatt with Rhea
Published on

ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರ ನಡುವೆ ಸಂಬಂಧ ಇದೆಯಾ?

ಇಂಥದ್ದೊಂದು ಪ್ರಶ್ನೆ ಬಹಳ ಜನರನ್ನು ಕಾಡುತ್ತಲೇ ಇತ್ತು. ಅದಕ್ಕೆ ಕಾರಣ, ಅವರಿಬ್ಬರ ನಡುವಿನ ಅನ್ಯೋನ್ಯತೆ. ಅದೇ ಕಾರಣಕ್ಕೆ ಅವರಿಬ್ಬರ ನಡುವೆ ಅನೈತಿಕ ಸಂಬಂಧವಿದೆ ಮತ್ತು ಸುಶಾಮತ್ ಸಿಂಗ್ ರಜಪೂತ್ ಸಾವಿನ ಹಿಂದೆ ಮಹೇಶ್ ಭಟ್ ಅವರ ಕೈವಾಡವೂ ಇದೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು.

ಆದರೆ, ಆಜ್‍ತಕ್‍ಗೆ ನೀಡಿರುವ ಸಂದರ್ಶನದಲ್ಲಿ ರಿಯಾ ಈ ಎಲ್ಲಾ ವಿಷಯಗಳನ್ನು ತಳ್ಳಿ ಹಾಕಿದ್ದಾರೆ. ಮಹೇಶ್ ಭಟ್ ಮತ್ತು ತಮ್ಮ ನಡುವೆ ಯಾವುದೇ ಅನೈತಿಕ ಸಂಬಂಧವಿರಲಿಲ್ಲ, ಅವರು ತನ್ನ ತಂದೆಯ ಸಮಾನರಾಗಿದ್ದರು ಎಂದು ರಿಯಾ ಹೇಳಿಕೊಂಡಿದ್ದಾರೆ.

`ನಾನು ಸುಶಾಂತ್ ಸಿಂಗ್ ಮನೆಯಿಂದ ಹೊರಬಂದಾಗಿ ನಿಜಕ್ಕೂ ಆಘಾತಕ್ಕೊಳಗಾಗಿದ್ದೆ. ಸುಶಾಂತ್ ನನ್ನನ್ನು ಮನೆಯಿಂದ ಹೊರಗೆ ಕಳಿಸಬಹುದು ಎಂದು ನಿರೀಕ್ಷಿಸಿರಲಿಲ್ಲ. ಸುಶಾಂತ್‍ಗೆ ಅನಾರೋಗ್ಯವಿದ್ದಾಗ ಸುಮಾರು ಒಂದು ವರ್ಷ ನಾನು ಅವನನ್ನು ನೋಡಿಕೊಂಡೆ. ಆದರೆ, ನನಗೆ ಹುಷಾರಿಲ್ಲದಿದ್ದಾಗ ಮನೆಯಿಂದ ಹೋಗುವುದಕ್ಕೆ ಸುಶಾಂತ್ ಹೇಳಿದ. ಇದರಿಂದ ಬಹಳ ನೊಂದಿದ್ದೆ. ಈ ಸಂದರ್ಭದಲ್ಲಿ ಮಹೇಶ್ ಭಟ್ ಅವರಿಗೆ ಫೋನ್ ಮಾಡಿದ್ದೆ. ಅವರು ನನ್ನ ತಂದೆಯ ತರಹ. ಅವರು ನನಗೆ ಸಾಕಷ್ಟು ಧೈರ್ಯ ತುಂಬಿದರು' ಎಂದು ರಿಯಾ ಹೇಳಿದ್ದಾರೆ.

`ನಾನು ಅವರನ್ನು ಸಾರ್ ಎಂದು ಕರೆಯುತ್ತೇನೆ. ಅವರು ನನ್ನನ್ನು ಮಗು ಎನ್ನುತ್ತಾರೆ. ಆದರೆ, ನಮ್ಮಿಬ್ಬರ ಸಂಬಂಧವನ್ನು ತಪ್ಪಾಗಿ ಕಲ್ಪಿಸಿಕೊಂಡು ಎಲ್ಲರೂ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ನನ್ನನ್ನು ಅವರ ಗರ್ಲ್‍ಫ್ರೆಂಡ್ ಎಂದು ಹೇಳಿದವರೂ ಇದ್ದಾರೆ. ಅವರ ಮಗಳೂ ನನ್ನ ವಯಸ್ಸಿನವಳು. ಅವರಿಂದ ನಾನು ಸಲಹೆ ಪಡೆಯುವುದೇ ತಪ್ಪಾ?' ಎಂದು ಅವರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net