

ಬೆಂಗಳೂರು: ನಿರ್ದೇಶಕ-ನಿರ್ಮಾಪಕ ರಾಮ್ಗೋಪಾಲ್ ವರ್ಮ ಅಷ್ಟು ಸುಲಭವಾಗಿ ಯಾರನ್ನೂ ಮೆಚ್ಚಿಕೊಳ್ಳುವುದೂ ಇಲ್ಲ, ಯಾರ ಬಗ್ಗೆ ಒಳ್ಳೆಯ ಮಾತುಗಳನ್ನೂ ಆಡುವುದಿಲ್ಲ. ಈಗ್ಯಾಕೆ ಈ ಮಾತು ಎಂದರೆ, ವರ್ಮ ಅವರು ಪ್ರಜಾಕೀಯದ ಧ್ಯೇಯೋದ್ದೇಶಗಳ ಬಗ್ಗೆ ಮತ್ತು ಉಪೇಂದ್ರರ ಯೋಚನೆಗಳ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ: ಶಿವಪ್ಪನಾದ ಶಿವಣ್ಣ – ತಮಿಳು ನಿರ್ದೇಶಕನ ಕನ್ನಡ ಸಿನಿಮಾ
ಉಪೇಂದ್ರ ಅವರು ಗುರುವಾರವಷ್ಟೇ ತಮ್ಮ ರಾಜಕೀಯ ಪಕ್ಷದ ಹೊಸ ವೆಬ್ಸೈಟ್ ಬಿಡುಗಡೆ ಮಾಡಿದ್ದಾರೆ. ಈ ವೆಬ್ಸೈಟ್ನಲ್ಲಿ ಪಕ್ಷದ ಧ್ಯೇಯೋದ್ದೇಶಗಳ ಬಗ್ಗೆ ಅವರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಉಪೇಂದ್ರ ಅವರು ಹೇಳುವಂತೆ ಪ್ರಜಾಕೀಯ ಪಕ್ಷದಲ್ಲಿ ಯಾವುದೇ ಪಾರ್ಟಿ ಫಂಡ್ ಇರುವುದಿಲ್ಲವಂತೆ. ಕಾರ್ಯಕರ್ತರು, ಪ್ರಾದೇಶಿಕ ಕಚೇರಿಗಳು, ಮೆರವಣಿಗೆಗಳು, ಸುಳ್ಳು ಆಶ್ವಾಸನೆಗಳು, ಬೇರೆಯವರನ್ನು ದೂಷಿಸುವುದು, ಜನರ ಕಣ್ಣಿಗೆ ಮಣ್ಣೆರೆಚುವ ಸಾಮಾಜಿಕ ಸೇವೆಗಳು, ಅರೆಸ್ಟ್ ಆಗುವ ನಾಟಕಗಳು ... ಇವ್ಯಾವುದೂ ಇರುವುದಿಲ್ಲವಂತೆ.
ಈ ವೆಬ್ಸೈಟ್ ಮತ್ತು ತಮ್ಮ ಪಕ್ಷದ ಧ್ಯೇಯೋದ್ದೇಶಗಳ ಕುರಿತಾಗಿ ಮುಕ್ತವಾಗಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ಉಪೇಂದ್ರ ಅವರು ತಿಳಿಸಿದ್ದರು. ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ರಾಮ್ಗೋಪಾಲ್ ವರ್ಮ, ಇದೊಂದು ಕ್ರಾಂತಿಕಾರಿಕ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಹ್ಯಾಕರ್ಸ್ ಕಾಟ!
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಿಜಕ್ಕೂ ಇದೊಂದು ಕ್ರಾಂತಿಕಾರಿಕ ಬೆಳವಣಿಗೆ. ಉಪೇಂದ್ರ ಅವರ ಈ ನಡೆ ಪ್ರಶಂಸನೀಯ' ಎಂದು ವರ್ಮ ಹೇಳಿಕೊಂಡಿದ್ದಾರೆ.