ಅಂದು ಆ ನಟಿಯ ಮೈಮಾಟಕ್ಕೆ ಮರುಳಾಗಿ ಪ್ರಪೋಸ್​​ ಮಾಡಲು ಮುಂದಾಗಿದ್ದ ಅರ್ಜುನ್​​ ಸರ್ಜಾಗೆ ಕಾದಿತ್ತು ಶಾಕ್! Arjun Sarja

Arjun Sarja
Published on

ಚೆನ್ನೈ: ಆ್ಯಕ್ಸನ್​ ಕಿಂಗ್​ ಅರ್ಜುನ್​ ಸರ್ಜಾ ( Arjun Sarja ) ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಮೂಲತಃ ಕನ್ನಡದವರೇ ಆದ ಅರ್ಜುನ್​ ಹೆಚ್ಚಾಗಿ ಮಿಂಚಿದ್ದು ಮಾತ್ರ ಕಾಲಿವುಡ್​ನಲ್ಲಿ. ಸದ್ಯ ಅರ್ಜುನ್​ ಕುಟುಂಬ ಚೆನ್ನೈನಲ್ಲೇ ನೆಲೆಸಿದೆ. ಹೀಗಿದ್ದರೂ ಅರ್ಜುನ್​ ಅವರಿಗೆ ಕನ್ನಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆಗಾಗ ಕನ್ನಡ ಸಿನಿಮಾಗಳನ್ನು ಸಹ ಮಾಡುತ್ತಿರುತ್ತಾರೆ.

ಅಂದಹಾಗೆ ಅರ್ಜುನ್​ ಸರ್ಜಾ, ಕನ್ನಡದ ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಅವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಆದರೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕರಾಗಿ ಹೆಸರು ಗಳಿಸಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ಅರ್ಜುನ್​ ಸರ್ಜಾ ಅವರ ಮಡದಿಯ ಹೆಸರು ನಿವೇದಿತ ಅರ್ಜುನ್. ಇವರು ಶಿವರಾಜ್​ಕುಮಾರ್​ ಅಭಿನಯದ ರಥಸಪ್ತಮಿ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನು ಅರ್ಜನ್​ ಸರ್ಜಾ ಅವರು ಇತ್ತೀಚೆಗೆ ಖಳನಾಯಕನ ಪಾತ್ರದಲ್ಲೂ ಮಿಂಚಿದ್ದಾರೆ. ಲಿಯೋ ಸಿನಿಮಾದಲ್ಲಿ ಅರ್ಜುನ್​ ಸರ್ಕಾ ವಿಲನ್​ ಆಗಿ ನಟಿಸಿದರು. ಈ ಸಿನಿಮಾ ಸಖತ್​ ಸದ್ದು ಮಾಡಿತು. ವಯಸ್ಸು 62 ಆದರೂ ಇಂದಿಗೂ ಅರ್ಜುನ್​ ಸರ್ಜಾ ಸಖತ್​ ಬಿಜಿಯಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅರ್ಜುನ್​ ಸರ್ಜಾ ಕುರಿತಾದ ಆಸಕ್ತಿದಾಯಕ ಸಂಗತಿಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಅರ್ಜುನ್​ ಸರ್ಜಾಗೆ ಖ್ಯಾತ ನಟಿಯೊಬ್ಬರ ಮೇಲೆ ಲವ್​ ಆಗಿತ್ತಂತೆ.

ಅರ್ಜುನ್ ಸರ್ಜಾ ಅವರು ನಟಿ ನಳಿನಿ ಅವರೊಂದಿಗೆ ಯಾರ್, ಥ್ಯಾಂಕು ಮತ್ತು ಎಂಗಲ್ ಕುರಲ್ ಎಂಬ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ನಳಿನಿ ಅವರ ಎದುರು ಮತ್ತೆ ಮತ್ತೆ ನಟಿಸುವಾಗ ಅವರ ಸೌಂದರ್ಯ, ಸೌಮ್ಯತೆ ಮತ್ತು ಮಾತುಗಾರಿಕೆಯಿಂದ ಅರ್ಜುನ್ ಆಕರ್ಷಿತರಾಗಿದ್ದರಂತೆ. ತಾನು ನಳಿನಿ ಅವರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದೇನೆ ಎಂಬುದು ಅರಿವಾದ ಬಳಿಕ ಅರ್ಜುನ್ ಸರ್ಜಾ, ನಳಿನಿ ಅವರ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ.

Actess Nalini

ಆದರೆ, ಅಷ್ಟರಲ್ಲಾಗಲೇ ನಳಿನಿ ಅವರು ಖ್ಯಾತ ನಿರ್ದೇಶಕ ಹಾಗೂ ನಟ ರಾಮರಾಜನ್ ಅವರನ್ನು ಪ್ರೀತಿಸುತ್ತಿದ್ದರು. ಅರ್ಜುನ್​ ಅವರು ಈ ಮಾಹಿತಿಯನ್ನು ಯಾರದೋ ಮೂಲಕ ತಿಳಿದುಕೊಂಡರು. ಇದರಿಂದ ಬೇಸರಗೊಂಡ ಅರ್ಜುನ್​ ಸರ್ಜಾ, ಒಲ್ಲದ ಮನಸ್ಸಿನಿಂದಲೇ ನಳಿನಿ ಅವರನ್ನು ಮರೆಯಬೇಕಾಯಿತು. ನಳಿನಿ ಅವರಿಗೆ ಕೊನೆಯವರೆಗೂ ತನ್ನ ಪ್ರೀತಿಯನ್ನು ಹೇಳಲಿಲ್ಲ. ನಳಿನಿ ಅವರು ಮದುವೆಯಾದಾಗ ಅರ್ಜುನ್‌ ಅವರ ಒನ್​ ಸೈಡ್​ ಲವ್​ ಚಿತ್ರರಂಗದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಅರ್ಜುನ್ ಅವರು "ಯಾರ್" ಚಿತ್ರದಲ್ಲಿ ನಟಿಸಿದ ನಂತರ ನಳಿನಿ ಅವರನ್ನು ಪ್ರೀತಿಸಲು ಪ್ರಾರಂಭಿಸಿದರು. ಈ ಸಿನಿಮಾದಲ್ಲಿ ನಳಿನಿ ಜೊತೆ ಕೆಲವು ಇಂಟಿಮೇಟ್ ದೃಶ್ಯಗಳಲ್ಲಿ ಅರ್ಜುನ್​ ಸರ್ಜಾ ನಟಿಸಿದ್ದರು.

ಎಂಬತ್ತರ ದಶಕದಿಂದಲೂ ಸಿನಿಮಾ ಮತ್ತು ಧಾರಾವಾಹಿ ಲೋಕದಲ್ಲಿ ಸಕ್ರಿಯರಾಗಿರುವ ನಟಿ ನಳಿನಿ, ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡದಲ್ಲೂ ನಟಿಸಿದ್ದಾರೆ. ಆ ಸಮಯದಲ್ಲಿ ಬಳಕುವ ಬಳ್ಳಿಯಂತಿದ್ದ ನಳಿನಿ, ಅನೇಕ ಗ್ಲಾಮರಸ್ ಪಾತ್ರಗಳನ್ನು ಮಾಡಿದ್ದರು. ಮದುವೆಯ ನಂತರವೂ ನಟನೆಯಲ್ಲಿ ಸಕ್ರಿಯರಾಗಿದ್ದ ನಳಿನಿ, ಈಗ ತಾಯಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಕುಟುಂಬಕ್ಕೆ ಇಷ್ಟವಿಲ್ಲದಿದ್ದರೂ ರಾಮರಾಜರನ್ನು ನಳಿನಿ ಅವರು ಮದುವೆಯಾದರು. ಆದರೆ, 2000 ರಲ್ಲಿ ಇಬ್ಬರೂ ಬೇರ್ಪಟ್ಟರು.

ಇತ್ತ ಅರ್ಜುನ್ ಸರ್ಜಾ ಅವರು ನಿವೇದಿತಾ ಅವರನ್ನು ಮದುವೆಯಾದರು. ನಿವೇದಿತಾ ಕನ್ನಡದ ನಟ ರಾಜೇಶ್ ಅವರ ಮಗಳು. ದಂಪತಿ ಇತ್ತೀಚೆಗೆ ತಮ್ಮ 36 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಪ್ರಮುಖ ಪಾತ್ರಗಳಿಂದ ದೂರವಿರುವ ಅರ್ಜುನ್ ಈಗ ಹೆಚ್ಚಾಗಿ ಪೋಷಕ ಮತ್ತು ಖಳ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net