ನಾಯಕತ್ವ ವಹಿಸಲು ಸಿದ್ಧ: ಎಲ್ಲರೂ ಒಟ್ಟುಗೂಡಿ ಫಿಲಂ ಸಿಟಿ ನಿರ್ವಿುಸಲು ಶಿವಣ್ಣ ಕರೆ

Shivanna
Published on

ಮೈಸೂರು: ‘ಕನ್ನಡ ಚಿತ್ರರಂಗಕ್ಕೆ ದೊಡ್ಡ ಫಿಲಂ ಸಿಟಿಯ ಅವಶ್ಯಕತೆ ಇದೆ. ಈ ವಿಚಾರದಲ್ಲಿ ಯಾರೂ ಲೀಡರ್ ಅಲ್ಲ. ಎಲ್ಲರೂ ಲೀಡರ್​ಗಳೇ. ಎಲ್ಲರೂ ಒಟ್ಟುಗೂಡಿ ಫಿಲಂ ಸಿಟಿ ನಿರ್ವಿುಸಬೇಕು’ ಎಂದು ಶಿವರಾಜಕುಮಾರ್ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಫಿಲಂ ಸಿಟಿ ನಿರ್ಮಾಣ ವಿಚಾರದಲ್ಲಿ ನಮ್ಮ ಚಿತ್ರರಂಗದ ಹಿರಿಯ ನಟರಾದ ರವಿಚಂದ್ರನ್, ಅನಂತ್​ನಾಗ್ ಹಾಗೂ ಇತರ ನಾಯಕರ ಸಹಕಾರ, ಸಲಹೆ ಬೇಕು’ ಎಂದರು.

‘ಚಿತ್ರನಗರಿ ನಿರ್ವಣಕ್ಕೆ ನಾನು ಸಹಕಾರ ನೀಡಲು ಸಿದ್ಧನಿದ್ದೇನೆ. ನನ್ನ ನಾಯಕತ್ವದಲ್ಲಿಯೇ ಮುನ್ನಡೆಸಬೇಕು ಎಂದು ಎಲ್ಲರೂ ಬಯಸಿದರೆ ನಾನು ಸಿದ್ಧನಿದ್ದೇನೆ. ಅವಸರದಲ್ಲಿ ನಿರ್ಮಾಣ ಆಗಬಾರದು. ವಿಶ್ವವೇ ತಿರುಗಿ ನೋಡುವ ಹಾಗೆ ಚಿತ್ರನಗರಿ ನಿರ್ಮಾಣ ಮಾಡುವ ಅವಶ್ಯಕತೆ ಇದೆ’ ಎಂದರು.

‘ಕರೊನಾ ವೈರಸ್ ಕುರಿತು ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ, ಮುಂಜಾಗ್ರತಾ ಕ್ರಮ ವಹಿಸುವುದು ಉತ್ತಮ’ ಎಂದು ಸಲಹೆ ನೀಡಿದ ಅವರು, ‘ರಾಜ್ಯದ ಜನತೆ ರಾಗಿ ಮುದ್ದೆ ತಿಂದು ಗಟ್ಟಿಮುಟ್ಟಾಗಿದ್ದಾರೆ. ಹಾಗಿದ್ದರೂ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಉತ್ತಮ. ವೈರಸ್ ನಮ್ಮ ದೇಹದೊಳಗೆ ಪ್ರವೇಶಿಸುವುದನ್ನು ತಪ್ಪಿಸಲು ಮಾಸ್ಕ್ ಧರಿಸುವುದು ಸೂಕ್ತ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net