

ಪುನೀತ್ ರಾಜಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮಾರ್ಚ್ 17ರಂದು ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಮಾರ್ಚ್ 16ಕ್ಕೆ ‘ಯುವರತ್ನ’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.
ಈ ಬಾರಿ ಡೈಲಾಗ್ ಟೀಸರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದ್ದು, ಚಿತ್ರದಲ್ಲಿನ ಪವರ್ಫುಲ್ ಸಂಭಾಷಣೆಗಳನ್ನು ಸೇರಿಸಿ ಈ ಟೀಸರ್ ಮಾಡಲಾಗುತ್ತಿದೆ. ಪುನೀತ್ ಅವರ ಪವರ್ಫುಲ್ ಅಭಿಮಾನಿಗಳಿಗೆ ಈ ಟೀಸರ್ ಅರ್ಪಿಸಲಾಗುತ್ತಿದ್ದು, ಈಗಾಗಲೇ ಚಿತ್ರತಂಡ ಈ ಕೆಲಸದಲ್ಲಿ ನಿರತವಾಗಿದೆ.
‘ಯುವರತ್ನ’ ಚಿತ್ರದಲ್ಲಿ ಪುನೀತ್ ಎದುರು ಸಾಯೇಷಾ ನಾಯಕಿಯಾಗಿ ನಟಿಸುತ್ತಿದ್ದು, ಮಿಕ್ಕಂತೆ ಧನಂಜಯ್, ದಿಗಂತ್, ಸೋನು ಗೌಡ, ಪ್ರಕಾಶ್ ರೈ ಮುಂತಾದವರು ನಟಿಸುತ್ತಿದ್ದು, ಸಂತೋಷ್ ಆನಂದರಾಮ್ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಲಾಂಛನದಡಿ ನಿರ್ವಣವಾಗುತ್ತಿರುವ ಈ ಚಿತ್ರ ಬಹುತೇಕ ಮುಕ್ತಾಯವಾಗಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಎಸ್.ಎಸ್ ಥಮನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.