ಪ್ರತಿದಿನ ಮಲಗುವ ಮುನ್ನ ಪತ್ನಿಯ ಕಾಲು ಮುಟ್ಟಿ ನಮಸ್ಕರಿಸುತ್ತಾರಂತೆ ರವಿಕಿಶನ್​! ಅಚ್ಚರಿಯ ಕಾರಣ ಹೀಗಿದೆ... Ravi Kishan

Ravi Kishan
Published on

Ravi Kishan: ನಟ ಮತ್ತು ಸಂಸದ ರವಿ ಕಿಶನ್ ಪ್ರತಿ ರಾತ್ರಿ ಮಲಗುವ ಮುನ್ನ ತಮ್ಮ ಪತ್ನಿಯ ಪಾದಗಳನ್ನು ಮುಟ್ಟಿ ನಮಸ್ಕರಿಸುವುದಾಗಿ ಕ್ಯಾಮೆರಾ ಮುಂದೆ ಬಹಿರಂಗಪಡಿಸಿದ್ದಾರೆ.

ಅಜಯ್​ ದೇವಗನ್​ ಹಾಗೂ ಮೃನಾಲ್​ ಠಾಕೂರ್​ ನಟನೆಯ ಸನ್​ ಆಫ್​ ಸರ್ದಾರ್​ 2 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ರವಿಕಿಶನ್​ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಪ್ರಚಾರದ ಭಾಗವಾಗಿ ಇತ್ತೀಚೆಗೆ ಚಿತ್ರತಂಡ ಕಪಿಲ್ ಶರ್ಮಾ ಅವರ ನೆಟ್‌ಫ್ಲಿಕ್ಸ್ ಶೋ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಭಾಗವಹಿಸಿತ್ತು. ಈ ವೇಳೆ ರವಿಕಿಶ್​ ಅವರು ತುಂಬಾ ಭಾವನಾತ್ಮಕವಾಗಿ ಮಾತನಾಡಿದರು.

ಕಾರ್ಯಕ್ರಮದ ಸಮಯದಲ್ಲಿ ಕಪಿಲ್ ಶರ್ಮಾ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ ನಟ ರವಿಕಿಶನ್​ ವಿವರಿಸಿದರು. ಕೃತಜ್ಞತೆ ಮತ್ತು ಗೌರವವನ್ನು ತೋರಿಸಲು ನಾನು ನನ್ನ ಪತ್ನಿ ಪ್ರೀತಿ ಅವರ ಪಾದಗಳನ್ನು ಪ್ರತಿದಿನ ಮುಟ್ಟುತ್ತೇನೆ. ನನ್ನಲ್ಲಿ ಹಣ ಅಥವಾ ಜೀವನೋಪಾಯವಿಲ್ಲದಿದ್ದಾಗ ಆಕೆ ನನ್ನೊಂದಿಗಿದ್ದಳು. ನನ್ನ ಎಲ್ಲ ಏರಿಳಿತಗಳ ಜೊತೆ ಆಕೆಯೂ ಸಾಗಿದ್ದಾಳೆ. ಜೀವನದ ಪ್ರತಿ ಹಂತದಲ್ಲ ನನಗೆ ಬೆಂಬಲವಾಗಿ ನಿಂತಳು ಎಂದು ಪತ್ನಿಯನ್ನು ಕೊಂಡಾಡಿದರು.

ನನ್ನ ಇಂದಿನ ಯಶಸ್ಸಿಗೆ ಕಾರಣ ನನ್ನ ಪತ್ನಿ. ಆಕೆ ನನ್ನ ಮೇಲೆ ಇಟ್ಟ ನಂಬಿಕೆಗೆ ನಾನು ಚಿರಋಣಿ. ಆಕೆಯ ಮೇಲಿನ ಗೌರವ ಹಾಗೂ ಕೃತಜ್ಞತೆಗಾಗಿ ಆಕೆ ಮಲಗಿರುವಾಗ ಮಾತ್ರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತೇನೆ. ಸಾಮಾನ್ಯ ಸಮಯದಲ್ಲಿ ಹಾಗೆ ಮಾಡಲು ನನಗೆ ಅವಕಾಶವಿಲ್ಲ ಎಂದು ರವಿಕಿಶನ್​ ಅವರು ಹೇಳಿದರು.

ಅಂದಹಾಗೆ ನಟ ರವಿ ಕಿಶನ್​ ಅವರು ಕನ್ನಡಿಗರಿಗೂ ಪರಿಚಿತರು. ನಟ ಕಿಚ್ಚ ಸುದೀಪ್​ ನಟನೆಯ ಹೆಬ್ಬುಲಿ ಹಾಗೂ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾದಲ್ಲಿ ಖಡಕ್​ ವಿಲ್ಲನ್​ ಆಗಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net