

ಮುಂಬೈ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬಾಲಿವುಡ್ ನಟಿ, ರೂಪದರ್ಶಿ ನತಾಶಾ ಸ್ಟಾಂಕೋವಿಕ್ ಜತೆಗಿನ ದಾಂಪತ್ಯದಿಂದ ದೂರವಾದ ಬಳಿಕ ಭಾರತ ಮೂಲದ ಬ್ರಿಟಿಷ್ ಪಾಪ್ ಗಾಯಕಿ ಜಾಸ್ಮಿನ್ ವಾಲಿಯಾ ಜತೆಗೆ ಸುತ್ತಾಡುತ್ತಿದ್ದರು. ಇವರಿಬ್ಬರು ಗ್ರೀಸ್ನಲ್ಲಿ ಡೇಟಿಂಗ್ ಕೂಡ ನಡೆಸಿದ್ದರು. ಹಾಲಿ ವರ್ಷ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಜಾಸ್ಮಿನ್ ದುಬೈ ಸ್ಟೇಡಿಯಂಗೆ ಹಾಜರಾಗಿ ಹಾರ್ದಿಕ್ ಪಾಂಡ್ಯರನ್ನು ಹುರಿದುಂಬಿಸಿದ್ದರು. ನಂತರದಲ್ಲಿ ಐಪಿಎಲ್ ಸಮಯದಲ್ಲೂ ಮುಂಬೈ ಇಂಡಿಯನ್ಸ್ ತಂಡದ ಕೆಲ ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಹಾಜರಿದ್ದರು.
ಆದರೆ ಇದೀಗ ಹಾರ್ದಿಕ್-ಜಾಸ್ಮಿನ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹಾರ್ದಿಕ್ ಮತ್ತು ಜಾಸ್ಮಿನ್ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರರನ್ನು "ಅನ್ಫಾಲೋ' ಮಾಡಿರುವುದೇ ಈ ಸುದ್ದಿ ಹರಡಲು ಕಾರಣವಾಗಿದೆ. ಇದರಿಂದ ವಿಚ್ಛೇದನದ ಬಳಿಕ 2ನೇ ಬಾರಿ ಹಾರ್ದಿಕ್ ಹೃದಯಭಗ್ನಗೊಂಡಿತೇ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.