ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ 'ರಶ್ಮಿಕಾ'ನೇ..

Feature
Published on

ಬೆಂಗಳೂರು: ಕಿರಿಕ್​ ಹುಡುಗಿ ಎಂದೇ ಹೆಸರಾಗಿರುವ ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇದೀಗ ರಾಜ್ಯ-ಹೊರರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಮಾತ್ರವಲ್ಲ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ ಲೆಕ್ಕದಲ್ಲಿ ಆಕೆ ಇದೀಗ ದಕ್ಷಿಣ ಭಾರತದಲ್ಲೇ ಟಾಪ್​-1 ನಟಿ. ಹೀಗಿರುವ ರಶ್ಮಿಕಾ ಇದೀಗ ಒಂದು ವರ್ಷದ ಮಗುವೊಂದನ್ನು ನೋಡಿ ಫಿದಾ ಆಗಿದ್ದಾರೆ.

ಓ ಮೈ ಗಾಡ್​.. ಎಷ್ಟು ಚಂದದ ಮಗು, ಹ್ಯಾಪಿ ಬರ್ತ್​ಡೇ ಮೈ ಡಾರ್ಲಿಂಗ್​. ಬಹುಶಃ ಒಂದು ದಿನ ನಾನು ನಿನ್ನನ್ನು ಭೇಟಿ ಮಾಡುತ್ತೇನೆ ಎಂದು ರಶ್ಮಿಕಾ ಮಂದಣ್ಣ ಆ ಮಗುವಿನ ಕುರಿತಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಮಗುವನ್ನು ರಶ್ಮಿಕಾ ನೋಡಲು ಬಯಸಿರುವುದಕ್ಕೆ ಕಾರಣ ಕೂಡ 'ರಶ್ಮಿಕಾ'ನೇ.

ಅಂದರೆ ನಿನ್ನೆಯಷ್ಟೇ ಮೊದಲ ವರ್ಷದ ಜನ್ಮದಿನ ಆಚರಿಸಲ್ಪಟ್ಟಿರುವ ಆ ಮಗುವಿನ ಹೆಸರು ಕೂಡ ರಶ್ಮಿಕಾ. ನಟಿ ರಶ್ಮಿಕಾ ಮೇಲಿನ ಅಭಿಮಾನದಿಂದ ಆ ಮಗುವಿಗೆ ರಶ್ಮಿಕಾ ಎಂದು ಹೆಸರಿಡಲಾಗಿದ್ದು, ಜನ್ಮದಿನದ ಫೋಟೋವನ್ನು ಟ್ವೀಟ್​ ಮಾಡಲಾಗಿದೆ. ಅದನ್ನು ನೋಡಿದ ರಶ್ಮಿಕಾ ತುಂಬಾ ಖುಷಿಯಾಗಿ, ಆ ಮಗುವನ್ನು ಒಂದು ದಿನ ಭೇಟಿ ಆಗುವುದಾಗಿ ಹೇಳಿದ್ದಾರೆ. ಮಾತ್ರವಲ್ಲ, ಅದು ಬಹುಶಃ ನನ್ನದೇ ಹೆಸರಿನವರೊಬ್ಬರ ಮೊದಲ ಭೇಟಿ ಆಗಿರಬಹುದು ಎಂದೂ ರಶ್ಮಿಕಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net