More

    ಶಾಲೆ ಶುರು, ಬೆಂಚಿಗೊಬ್ರು ಅಥವಾ ಇಬ್ರು; ಆ ಕಡೆಯಿಂದ ಬಂದು ಈ ಕಡೆಯಿಂದ ಹೋಗ್ಬೇಕು, ಕೆಮ್ಮಿದ್ರೆ ಮನೆಗೆ: ಇಲ್ಲಿದೆ ಎಸ್​ಒಪಿ ಡಿಟೇಲ್ಸ್​..

    ಬೆಂಗಳೂರು: ಆಗಸ್ಟ್​ 23ರಿಂದ 9 ಮತ್ತು 10ನೇ ತರಗತಿ ವರೆಗೆ ಶಾಲೆಗಳನ್ನು ಭೌತಿಕವಾಗಿ ತೆರೆಯಲು ಆದೇಶ ಹೊರಡಿಸಿರುವ ಸರ್ಕಾರ, ವಿದ್ಯಾರ್ಥಿಗಳು-ಶಿಕ್ಷಕರು ಮತ್ತು ಪೋಷಕರು ಏನೇನು ಕ್ರಮಗಳನ್ನು ಪಾಲಿಸಬೇಕು ಎಂಬ ಕುರಿತು ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್​ಒಪಿ) ಬಿಡುಗಡೆ ಮಾಡಿದೆ.

    ಸುದೀರ್ಘ ಅವಧಿಗೆ ಶಾಲೆಗಳು ಮುಚ್ಚಿಯೇ ಇದ್ದಿದ್ದರಿಂದ ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸ್ಯಾನಿಟೈಸ್​ ಮಾಡಿಯೇ ತರಗತಿಗಳನ್ನು ಆರಂಭಿಸಬೇಕು ಎಂದಿರುವ ಸರ್ಕಾರ, ಮಾಸ್ಕ್​ ಧರಿಸುವುದು, ವೈಯಕ್ತಿಕ ಅಂತರ ಮುಂತಾದ ಹಲವಾರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.

    ಮಕ್ಕಳು ಶಾಲೆಗೆ ಬರಲು ಹಾಗೂ ಹೋಗಲು ಪ್ರತ್ಯೇಕ ಆಗಮನ-ನಿರ್ಗಮನ ವ್ಯವಸ್ಥೆ ಮಾಡಬೇಕು. ಬೆಂಚಿನ ಉದ್ದಕ್ಕೆ ಅನುಗುಣವಾಗಿ ಬೆಂಚಿಗೆ ಒಬ್ಬರು ಅಥವಾ ಇಬ್ಬರನ್ನು ಮಾತ್ರ ಕೂರಿಸಬೇಕು. ಬೆಂಚ್​ಗಳ ನಡುವೆಯೂ ಅಂತರ ಇರಬೇಕು. ಹಾಗೆಯೇ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಲ್ಲಿ ಕೆಮ್ಮು, ಜ್ವರ, ನೆಗಡಿ, ಮೂಗು ಸೋರುವುದು ಇತ್ಯಾದಿ ಲಕ್ಷಣಗಳು ಕಂಡುಬಂದರೆ ಅವರನ್ನು ತಾತ್ಕಾಲಿಕವಾಗಿ ಐಸೋಲೇಷನ್​ನಲ್ಲಿ ಇರಿಸಿ, ಪೋಷಕರನ್ನು ಕರೆಸಿ, ಮನೆಗೆ ಕಳುಹಿಸಿಕೊಡಬೇಕು ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.

    ಇಲಾಖೆ ಹೊರಡಿಸಿರುವ ಆದೇಶದ ಸಂಪೂರ್ಣ ವಿವರ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts