More

    ಬೇಸಿಗೆ ಶಿಬಿರ ಮಕ್ಕಳಿಗೆ ಮತ್ತೊಂದು ಶಾಲೆಯಾಗಬಾರದು

    ಚಿತ್ರದುರ್ಗ: ಮಕ್ಕಳಲ್ಲಿರುವ ಸೃಜನಶೀಲತೆ,ಕೌಶಲ ಹಾಗೂ ಕಲಿಕಾ ಮನೋಭಾವ ಹೆಚ್ಚಿಸಲು ಬೇಸಿಗೆ ಶಿಬಿರ ಅವಶ್ಯವಿದೆ,ಆದರೆ ಈ ಶಿಬಿರಗಳು ಮಕ್ಕಳಿಗೆ ಮ ತ್ತೊಂದು ಶಾಲೆಯಾಗಬಾರದೆಂದು ನಗರದ ವಿಠ್ಠಲ ಬೆರಳಚ್ಚು ವಿದ್ಯಾಸಂಸ್ಥೆ ಪ್ರಾಂಶುಪಾಲ ಆರ್‌ಎಂ ಶ್ಯಾಮ್‌ರಾವ್ ಹೇಳಿದರು.
    ಚಿತ್ರದುರ್ಗ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿರುವ 10ದಿನಗಳ ಮಕ್ಕಳ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಅನೇಕರಿಗೆ ಬೇಸಿಗೆ ಶಿಬಿರವೆಂದರೆ ಹಣ ಮಾಡುವ ಮತ್ತೊಂದು ಮಾರ್ಗವಾಗಿದೆ. ಯೋಗ ಶಿಕ್ಷಣ ಸಂಸ್ಥೆ ಉಚಿತವಾಗಿ ಶಿಬಿರ ಆಯೋಜಿಸಿರು ವುದು ಶ್ಲಾಘನೀಯ. ಮಕ್ಕಳು,ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳ ಬೇಕೆಂದರು.
    ಸಮಾಜ ಸೇವಕಿ ಶೈಲಜಾರೆಡ್ಡಿ ಮಾತನಾಡಿ,ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಇಂಥ ಶಿಬಿರಗಳ ಸಹಕಾರಿಯಾಗಿವೆ ಎಂದರು. 55ಕ್ಕೂ ಹೆಚ್ಚು ಮ ಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ನಾಗಲತಾ,ನಿರ್ಮಲಾ,ತಿಪ್ಪೇರುದ್ರಪ್ಪ,ರವಿಅಂಬೇಕರ್,ಗಗನಾ,ಅಂಬುಜಾಕ್ಷಿ,ನಳಿನಾಕ್ಷಿ,ಚೈತ್ರಾ,ರೇಣುಕಾ, ಸುನೀತಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts