ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ ಬೇರೆಯಾಗಲು ಈ ನಟ ಕಾರಣವಂತೆ!?

Rashmika Vijay
Published on

ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ಜೋಡಿಗಳಲ್ಲಿ ವಿಜಯ್​ ದೇವರಕೊಂಡ, ರಶ್ಮಿಕಾ ಜೋಡಿ ಸಹ ಒಂದು. ಈ ಜೋಡಿ ‘ಗೀತ ಗೋವಿಂದಂ’ ಮತ್ತು ‘ಡಿಯರ್​ ಕಾಮ್ರೇಡ್​’ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ಅವರಿಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆಯಾದರೂ, ಇಬ್ಬರೂ ತಾವು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡೇ ಬರುತ್ತಿದ್ದರು.

ವಿಜಯ್​ ಮತ್ತು ರಶ್ಮಿಕಾ ತಾವಿಬ್ಬರೂ ಸ್ನೇಹಿತರು ಎಂದು ಎಷ್ಟೇ ಹೇಳಿಕೊಂಡರೂ, ಮಂದಿ ಅದನ್ನು ನಂಬುವುದಕ್ಕೆ ಯಾರೂ ಸಿದ್ಧರಿರಲಿಲ್ಲ. ಕಾರಣ, ಅವರಿಬ್ಬರ ಒಡನಾಟ ಮತ್ತು ಸುತ್ತಾಟ. ಇಬ್ಬರು ಹೊಸ ವರ್ಷಕ್ಕೆ ವಿದೇಶಕ್ಕೆ ಹೋಗಿ ಬಂದಿದ್ದರು. 2022ರಲ್ಲಿ ಹೊಸ ವರ್ಷಕ್ಕೆ ಇಬ್ಬರೂ ಗೋವಾದಲ್ಲಿದ್ದರು. ಹಾಗಾಗಿ, ಅವರಿಬ್ಬರೂ ಬರೀ ಸ್ನೇಹಿತರಷ್ಟೇ ಅಲ್ಲ, ಅವರಿಬ್ಬರ ನಡುವೆ ಇನ್ನೂ ಏನೋ ಇದೆ ಎಂಬ ಗುಮಾನಿ ಎಲ್ಲರಲ್ಲೂ ಇತ್ತು.

ಇಬ್ಬರ ನಡುವೆ ಪ್ರೀತಿ ಇದೆ. ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯಾಗಿತ್ತು. ಆದರೆ, ಇತ್ತೀಚೆಗೆ ರಶ್ಮಿಕಾ ಮತ್ತು ವಿಜಯ್​ ಅಂತರ ಕಾಯ್ದುಕೊಂಡಿರುವ ಸುದ್ದಿಯು ಕೇಳಿಬರುತ್ತಿದೆ. ವಿಜಯ್​ ಹುಟ್ಟುಹಬ್ಬದ ದಿನ ರಶ್ಮಿಕಾ ಒಂದು ಶುಭಾಶಯ ಸಹ ಕೋರಿಲ್ಲ. ಅಲ್ಲದೆ, ಇತ್ತೀಚೆಗೆ ಇಬ್ಬರು ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಇಬ್ಬರು ನಡುವೆ ವೈಮನಸ್ಸು ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ಇದೀಗ ರಶ್ಮಿಕಾ ಕುರಿತು ಹೊಸ ಸುದ್ದಿಯೊಂದು ಕೇಳಿಬಂದಿದೆ. ವಿಜಯ್​ ಜತೆ ಅಂತರ ಕಾಯ್ದುಕೊಂಡಿರುವ ರಶ್ಮಿಕಾ, ಇದೀಗ ಟಾಲಿವುಡ್​ನ ಯುವ ನಟ ಬೆಲ್ಲಮಕೊಂಡ ಶ್ರೀನಿವಾಸ್​ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ವಿಜಯ್​ ಜತೆ ಸಂಬಂಧ ಕಡಿದುಕೊಳ್ಳಲು ಸಹ ಶ್ರೀನಿವಾಸ್​ ಕಾರಣ ಎನ್ನಲಾಗುತ್ತಿದೆ. ಆದರೆ, ಇದು ಎಷ್ಟು ಸತ್ಯ ಅಂತಾ ಅವರೇ ತಿಳಿಸಬೇಕಿದೆ.

ಇ ಸುದ್ದಿ ಹರಡಲು ಕಾರಣವೂ ಇದೆ. ಇತ್ತೀಚೆಗೆ ರಶ್ಮಿಕಾ ಮತ್ತು ಶ್ರೀನಿವಾಸ್​ ಇಬ್ಬರು ಒಟ್ಟಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಇದು ಮೊದಲ ಬಾರಿಯಲ್ಲ, ಇತ್ತೀಚೆಗೆ ಇವರಿಬ್ಬರು ಆಗಾಗ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಸಂಗತಿ ಜನರ ಬಿಸಿ ಚರ್ಚೆಗೆ ಕಾರಣವಾಗಿದೆ. ಇಬ್ಬರು ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ.

Rashmika Bellamakonda

ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ತಿಳಿದುಬರಬೇಕಿದೆ. ಇಬ್ಬರು ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 2023ರ ಸೆಪ್ಟೆಂಬರ್ 1 ರಂದು ಸಮಂತಾ ರುತ್ ಪ್ರಭು ಜೊತೆಗಿನ 'ಕುಶಿ' ಬಿಡುಗಡೆಗೆ ದೇವರಕೊಂಡ ಸಜ್ಜಾಗುತ್ತಿದ್ದಾರೆ. ಶ್ರೀನಿವಾಸ್ ಅವರು ಚಲನಚಿತ್ರ ನಿರ್ಮಾಪಕ ಎಸ್.ಎಸ್ ರಾಜಮೌಳಿ ಅವರ 'ಛತ್ರಪತಿ' ಯ ಅಧಿಕೃತ ರಿಮೇಕ್‌ಗೆ ಸಿದ್ಧರಾಗಿದ್ದು, ಈ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ರಶ್ಮಿಕಾ ಅವರು ಮುಂದಿನ 'ಅನಿಮಲ್' ಚಿತ್ರದಲ್ಲಿ ರಣಬೀರ್ ಕಪೂರ್ ಎದುರು ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net