ಐದು ನಗರಗಳಲ್ಲಿ ಮನೆ ಖರೀದಿಸಿದ್ದಾರಾ ರಶ್ಮಿಕಾ ಮಂದಣ್ಣ?

Rashmika (13)
Published on

ಹೈದರಾಬಾದ್​: ರಶ್ಮಿಕಾ ಮಂದಣ್ಣ ಈಗ ಪ್ಯಾನ್​ ಇಂಡಿಯಾ ನಟಿಯಾಗಿ ಹೊರಹೊಮ್ಮಿರುವ ವಿಷಯ ಹೊಸದೇನಲ್ಲ. 'ಪುಷ್ಪ' ಚಿತ್ರದ ಮೂಲಕ ಪ್ಯಾನ್​ ಇಂಡಿಯಾ ನಟಿಯಾದ ರಶ್ಮಿಕಾ, ಈಗ ಬಾಲಿವುಡ್​​ ಮತ್ತು ಟಾಲಿವುಡ್​ ದೊಡ್ಡ ಬಹುಬೇಡಿಕೆಯ ನಟಿಯಾಗಿದ್ದಾರೆ.

ಬೇರೆಬೇರೆ ಭಾಷೆಗಳಲ್ಲಿ ನಟಿಸುತ್ತಿರುವುದರಿಂದ ಅವರು ಅಲ್ಲಿ ಹೋಟೆಲ್​ಗಳಲ್ಲಿ ತಂಗುವ ಬದಲು ಅಲ್ಲೇ ಮನೆ ಖರೀದಿಸಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಗೋವಾದಲ್ಲಿ ರಶ್ಮಿಕಾ ಮನೆ ಖರೀದಿಸಿದ್ದಾರೆ ಎಂಬ ಸುದ್ದಿ ಯೂ ಇತ್ತು. ಆದರೆ, ರಶ್ಮಿಕಾ ಮಾತ್ರ ಆ ವಿಷಯದ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ.

ಇದೀಗ ಅವರು ಈ ಬಗ್ಗೆ ಮೌನ ಮುರಿದಿದ್ದಾರೆ. ಕೊಡಗು, ಬೆಂಗಳೂರು, ಗೋವಾ, ಹೈದರಾಬಾದ್​ ಹಾಗೂ ಮುಂಬೈನಲ್ಲಿ ರಶ್ಮಿಕಾ ಐಶಾರಾಮಿ ಮನೆಗಳನ್ನು ಖರೀದಿಸಿದ್ದಾರೆ ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್​ಗೆ ಖುದ್ದು ಅವರು ಕಮೆಂಟ್​ ಮಾಡಿದ್ದಾರೆ. ಈ ವಿಷಯ ನಿಜವಾಗಿದ್ದರೆ ಎಷ್ಟು ಚಂದವಿರುತ್ತಿತ್ತು ಎಂದು ಬರೆದುಕೊಂಡಿದ್ದಾರೆ. ಎರಡು ಕಣ್ಣೀರಿನ ಎಮೋಜಿಗಳ ಜತೆಗೆ ಅವರು ಈ ಸಾಲನ್ನು ಬರೆದಿದ್ದಾರೆ. ಆ ಮೂಲಕ ಮನೆಗಳ ಒಡೆತನದ ಸುದ್ದಿಗೆ ಬ್ರೇಕ್​ ಹಾಕಿದ್ದಾರೆ.

'ಪುಷ್ಪ' ಚಿತ್ರದ ಮುಂದುವರೆದ ಭಾಗದಲ್ಲಿ ನಟಿಸುತ್ತಿರುವ ರಶ್ಮಿಕಾ, ಅದಲ್ಲದೆ ರಣಬೀರ್​ ಕಪೂರ್​ ಅಭಿನಯದ 'ಅನಿಮಲ್​' ಚಿತ್ರದಲ್ಲೂ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net