ಥ್ಯಾಂಕ್ಯೂ ಮೈ ಲವ್ಸ್​​… ರಶ್ಮಿಕಾ ಹೀಗ್ಯಾಕೆ ಅಂದ್ರು?

Rashmika Mandanna
Published on

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ತಮ್ಮ ಟಿಟ್ವರ್​​ನಲ್ಲಿ 'ಥ್ಯಾಂಕ್ಯೂ ಮೈ ಲವ್ಸ್​​' ಎಂದು ಬರೆದುಕೊಂಡಿದ್ದಾರೆ. ಇದೀಗ ಎಲ್ಲರೂ ರಶ್ಮಿಕಾ ಯಾರಿಗೆ ಮತ್ತು ಯಾಕಾಗಿ ಧನ್ಯವಾದ ಹೇಳಿದ್ದಾರೆ ಎಂದು ಆಲೋಚಿಸುತ್ತಿದ್ದಾರೆ. ಅಸಲಿಗೆ ರಶ್ಮಿಕಾ ಮಂದಣ್ಣ ಥ್ಯಾಂಕ್ಯೂ ಹೇಳಿರುವುದು ತಮ್ಮ ಮಾತಿಗೆ ಬೆಂಬಲ ಸೂಚಿಸಿ, ಧೈರ್ಯದ ಮಾತುಗಳನ್ನಾಡಿದವರಿಗೆ.

ಹೌದು, ರಶ್ಮಿಕಾ ಮಂದಣ್ಣ ಅವರನ್ನು ಹಲವು ಕಾರಣಕ್ಕಾಗಿ ಪದೇ ಪದೇ ಟ್ರೋಲ್ ಮಾಡಿ ಕಾಲೆಳೆಯಲಾಗುತ್ತಿತ್ತು. ಇದೆಲ್ಲವನ್ನೂ ಸುಮ್ಮನಿದ್ದು ಗಮನಿಸುತ್ತಿದ್ದ ರಶ್ಮಿಕಾ, ನಿನ್ನೆ (ನ.9) ಮೌನ ಮುರಿದಿದ್ದರು. ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ತಮ್ಮ ನೋವನ್ನು ಬಹಿರಂಗ ಬರಬಹದ ಮೂಲಕ ಹೊರಹಾಕಿದ್ದರು.

'ನನ್ನ ಕೆಲಸದ ಮೂಲಕ ನಿಮ್ಮೆಲ್ಲರನ್ನು ರಂಜಿಸಲು ಪರಿಶ್ರಮ ಪಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾನು ಹೆಚ್ಚು ಯೋಚಿಸುತ್ತೇನೆ. ನನ್ನ ಕೆಲಸ ಯಾವತ್ತೂ ನೀವೆಲ್ಲರೂ ಹೆಮ್ಮ ಪಡುವಂತೆ ಇರಲು ಪ್ರಯತ್ನಿಸುತ್ತೇನೆ. ಆದರೆ ನಾನಿಂದು ಹೇಳದೇ ಇರುವ ವಿಚಾರವೊಂದಕ್ಕೆ ನನ್ನನ್ನು ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಇದು ನನಗೆ ಅತೀವ ಬೇಸರ ತರಿಸಿದೆ’ ಎಂದು ರಶ್ಮಿಕಾ ಬರೆದುಕೊಂಡಿದ್ದರು

ರಶ್ಮಿಕಾ ತಮ್ಮ ನೋವನ್ನು ಹೊರಹಾಕುತ್ತಿದ್ದಂತೆ ಅನೇಕ ಜನ ಸಿನಿಮಾ ತಾರೆಯರು ರಶ್ಮಿಕಾಗೆ ಬೆಂಬಲ ಸೂಚಿಸಿದ್ದರು. ನಟ ದುಲ್ಖರ್ ಸಲ್ಮಾನ್, ನಟಿ ರಮ್ಯಾ, ನಟಿ ಹನ್ಸಿಕಾ ಮುಂತಾದವರು ಕಮೆಂಟ್ ಮಾಡುವ ಮೂಲಕ ಧೈರ್ಯ ಹೇಳಿದ್ದರು. ಇದೀಗ ರಶ್ಮಿಕಾ ತಮಗೆ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ತಮ್ಮ ಇನ್ಸ್​ಟಾಗ್ರಾಂನಲ್ಲಿ ಸ್ಟೋರಿ ಹಾಕುವ ಮೂಲಕ, 'ನಿನ್ನೆಯಿಂದ ನನಗೆ ಹಲವು ಮೆಸೇಜ್​ಗಳು ಬಂದಿವೆ. ಇದು ನನಗೆ ಇನ್ನಷ್ಟು ಹುರುಪು ನೀಡಿದೆ. ಸದ್ಯ ನನಗೆ ಬಂದಿರುವ ಪ್ರೀತಿಯನ್ನು ಅಗತ್ಯ ಇರುವವರಿಗೆ ರವಾನಿಸಬಹುದಾಗಿದೆ' ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net