ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಎಂದು ಬಹುತೇಕ ಎಲ್ಲಾ ವುಡ್‌ಗಳಲ್ಲಿಯೂ ರಶ್ಮಿಕಾ ಸದ್ದು ಮಾಡುತ್ತಲೇ ಇದ್ದು, ಸದ್ಯ ತೆಲುಗಿನ 'ಸೀತಾ ರಾಮಂ' ಎಂಬ ಸಿನಿಮಾದಲ್ಲಿನ ತಮ್ಮ ಲುಕ್ಗೆಂದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ, ನಟ ದುಲ್ಖರ್ ಸಲ್ಮಾನ್, ನಟಿ ಮೃಣಾಲ್ ಠಾಕೂರ್ ಅವರು ನಟಿಸುತ್ತಿರುವ ಈ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಹೌದು, ರಾಮನವಮಿಯಂದೇ ಈ ಚಿತ್ರದ ಟೈಟಲ್ 'ಸೀತಾ ರಾಮಂ' ಎಂದು ಅನೌನ್ಸ್ ಮಾಡಲಾಗಿದೆ. ಈ ತೆಲುಗು ಸಿನಿಮಾ ಕೇವಲ ತೆಲುಗು ಭಾಷೆಯಲ್ಲದೇ, ತಮಿಳು, ಮಳಯಾಲಂ, ಹಿಂದಿ ಭಾಷೆಗಳಲ್ಲಿ ಸಹ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಆದರೆ, ರಾಮನವಮಿಯಂದು ಕೇವಲ ಈ ಸಿನಿಮಾ ಟೈಟಲ್ ಮಾತ್ರವಲ್ಲದೇ ಸಿನಿಪ್ರಿಯರಿಗೆ ಈ ಚಿತ್ರದ ಒಂದು ವಿಡಿಯೋ ರಿಲೀಸ್ ಸಹ ಉಡುಗೊರೆಯಾಗಿ ಸಿಕ್ಕಿದೆ. ಹಾಗಾಗಿ, ಸಣ್ಣ ಟೀಸರ್ ಅಥವಾ ವಿಡಿಯೋ ನೋಡಿದ್ಮೇಲೆ ಸಿನಿಪ್ರಿಯರಲ್ಲಿ ರಶ್ಮಿಕಾ ಅವರ ಪಾತ್ರ ಥ್ರಿಲ್, ಶಾಕ್ ಮಾಡಿದೆ. ಕಾರಣ, ಇದೇ ಮೊದಲ ಬಾರಿಗೆ ನಟಿ ರಶ್ಮಿಕಾ ಮಂದಣ್ಣ ಒಂದು ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಅವರು ಮುಸ್ಲಿಂ ಯುವತಿಯ ಪಾತ್ರದಲ್ಲಿ (ಅಫ್ರಿನ್) ಬೆಳ್ಳಿ ತೆರೆಯ ಮೇಲೆ ಮಿಂಚಲಿದ್ದಾರೆ ಎಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.