ಬಾಲಕಿಯಾಗಿದ್ದಾಗಲೇ ರಶ್ಮಿಕಾಗಿತ್ತು ಬಣ್ಣದ ನಂಟು; ಇಲ್ಲಿದೆ ನೋಡಿ ಪುರಾವೆ!

collage (1)
Published on

ಸೌತ್​ ಸಿನಿ ದುನಿಯಾದಲ್ಲಿ ರಶ್ಮಿಕಾ ಮಂದಣ್ಣ ಹೆಸರು ಚಿರಪರಿಚಿತ. ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡ ನಟಿ. ಇದೀಗ ಇದೇ ನಟಿಯ ಬಗ್ಗೆ ಮತ್ತೊಂದು ಕೌತುಕದ ವಿಚಾರ ಹೊರಬಿದ್ದಿದೆ. ಅದೇನೆಂದರೆ, 19 ವರ್ಷದ ಹಿಂದೆಯೇ ರಶ್ಮಿಕಾಗೆ ಬಣ್ಣದ ನಂಟಿತ್ತು ಎಂಬುದು! ಒಂದು ಕ್ಷಣ ಅಚ್ಚರಿ ಅನಿಸ.. ಕಿರಿಕ್​ ಪಾರ್ಟಿ ಮೂಲಕ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದ್ದ ರಶ್ಮಿಕಾ, 20 ವರ್ಷದ ಹಿಂದೆ ಸಿನಿಮಾದಲ್ಲಿ ನಟಿಸಿದ್ರಾ? ಎಂಬ ಪ್ರಶ್ನೆಯೂ ಮೂಡಬಹುದು. ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅದನ್ನು ಸ್ವತಃ ರಶ್ಮಿಕಾ ಬಿಚ್ಚಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ 2001ರಲ್ಲಿ ತಮಿಳು ಮ್ಯಾಗ್​ಜೀನ್​ ಫೋಟೋಶೂಟ್​ವೊಂದರ ಫೋಟೋ ಪ್ರಕಟಿಸಿ, ನಾವು ಆವಾಗಲೇ ಹಂಗೆ ಎಂದು ಅಂದಿನ ದಿನಗಳನ್ನು ಮತ್ತೆ ನೆನಪು ಮಾಡಿಕೊಂಡಿದ್ದಾರೆ. ‘ಇದು 2001ರಲ್ಲಿ ತೆಗೆದ ನನ್ನ ಮೊದಲ ಮ್ಯಾಗಜೀನ್​ ಕವರ್ ಫೋಟೋ. ನನಗೆ ಈಗಲೂ ಆ ಫೋಟೋ ತೆಗೆದ ದಿನ ನೆನಪಿದೆ. ಅಂದಿನ ಆ ಕವರ್ ಪುಟವನ್ನು ಅಮ್ಮ ಇಂದಿಗೂ ಭದ್ರವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಈಗಲೂ ಅದು ಮುಂದುವರಿಯುತ್ತಿದೆ’ ಎಂದಿರುವ ರಶ್ಮಿಕಾ ಪ್ರಸ್ತುತ ಈಗಿನ ಸ್ಥಿತಿಗತಿ ಬಗ್ಗೆಯೂ ಮಾತನಾಡಿದ್ದಾರೆ.

ನಾನು ಈ ಹಂತಕ್ಕೆ ಬರಬೇಕೆಂದರೆ, ಇಷ್ಟೊಂದು ಪ್ರೀತಿ ಪಡೆಯಬೇಕೆಂದರೆ, ಅದಕ್ಕೆ ನೀವುಗಳೇ ಕಾರಣ. ನನಗೆ ಒಮ್ಮೊಮ್ಮೆ ಅಚ್ಚರಿ ಅನಿಸುತ್ತದೆ. ಈ ಹಂತಕ್ಕೆ ಬರಲು ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳ ಹಾರೈಕೆಯೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಈವರಗೆ ನಾನು ಕೆಲಸ ಮಾಡಿದ ಸಿನಿಮಾ ತಂಡಗಳೂ ಇದರಲ್ಲಿ ಪಾಲುದಾರಿಕೆ ಹೊಂದಿವೆ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net