PHOTO GALLERY| ಬಾಲಿವುಡ್​ ನಟ ಟೈಗರ್ ಶ್ರಾಫ್​ ತಂಗಿಯ ಲಿಪ್​ಲಾಕ್​ ಫೋಟೋಗಳು ವೈರಲ್​!

Tiger_Shroff_Krishna_Shroff
Published on

ಬಾಲಿವುಡ್​ನ ಹಿರಿಯ ನಟ ಜಾಕಿ ಶ್ರಾಫ್​ಗೆ ಇಬ್ಬರು ಮಕ್ಕಳು. ಮಗ ಟೈಗರ್ ಶ್ರಾಫ್​ ಮತ್ತು ಮಗಳು ಕೃಷ್ಣ ಶ್ರಾಫ್​. ಟೈಗರ್​ ಶ್ರಾಫ್​ ಬಗ್ಗೆ ಈಗಾಗಲೇ ಗೊತ್ತು. ಆ್ಯಕ್ಷನ್​ ಸಿನಿಮಾ ಮೂಲಕವೇ ಎಲ್ಲರನ್ನು ಸೆಳೆದು, ನೃತ್ಯದ ಮೂಲಕ ಮೋಡಿ ಮಾಡುತ್ತಾರೆ. ಆದರೆ, ಇದೇ ಟೈಗರ್​ ಶ್ರಾಫ್​ ತಂಗಿ ಕೃಷ್ಣ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಗೊತ್ತಿಲ್ಲ ಎಂಬುದಕ್ಕಿಂತ ಅವರು ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಾಗಂತ ಆಗಾಗ ಇಂಟರ್​ನೆಟ್​ನಲ್ಲಿ ಸೆನ್ಷೆಷನ್​ ಕ್ರಿಯೇಟ್​ ಮಾಡುವುದು ಅವರ ಖಯಾಲಿ. ಇದೀಗ ಲಿಪ್​ಲಾಕ್​ ಮೂಲಕ ಸುದ್ದಿಯಲ್ಲಿದ್ದಾರೆ ಕೃಷ್ಣ.

ಹೌದು, ಬಿಕಿನಿ ಫೋಟೋಗಳು, ಹಾಟ್​ ಹಾಟ್​ ಅವತಾರದ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತ, ಸದ್ದು ಮಾಡುವ ಕೃಷ್ಣ, ಈ ಸಲ ಪ್ರಿಯಕರ ಇಬಾನ್​ ಹೈಮ್ಸ್ ಜತೆಗಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಇಬ್ಬರೂ ಆಲಿಂಗಿಸಿಕೊಂಡು ಚುಂಬಿಸುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಇಲ್ಲಿಯವರೆಗೂ ಯಾವುದಕ್ಕೂ ಮುಚ್ಚುಮರೆಯಿಲ್ಲದೆ ಅನಿಸಿದ್ದನ್ನು ಹೇಳುವ, ತೋಚಿದ್ದನ್ನು ಮಾಡುವ ವ್ಯಕ್ತಿತ್ವ ಕೃಷ್ಣ ಅವರದ್ದು. ಮನೆಯಿಂದಲೂ ಅವರಿಗೆ ಯಾವುದೇ ನಿರ್ಬಂಧವಿಲ್ಲ. ಅಷ್ಟೇ ಅಲ್ಲ ಬಾಸ್ಕೇಟ್​ಬಾಲ್ ಪ್ಲೇಯರ್ ಇಬಾನ್​ ಹೈಮ್ಸ್ ಜತೆ ಡೇಟಿಂಗ್​ ಮಾಡುತ್ತಿರುವ ವಿಚಾರವನ್ನೂ ಮುಕ್ತವಾಗಿ ಹೇಳಿಕೊಂಡಿದ್ದರು. ಇದೀಗ ಇಬಾನ್​ ಜತೆಗಿನ ಲಿಪ್​ಲಾಕ್​ ಫೋಟೋಗಳನ್ನು ಹಂಚಿಕೊಂಡು ಸೌಂಡ್ ಮಾಡುತ್ತಿದ್ದಾರೆ.

ಫಿಟ್​ನೆಸ್​ಗೆ ಸಂಬಂಧಿಸಿದಂತೆ ಎಂಎಂಎ ಮ್ಯಾಟ್ರಿಕ್ಸ್ ಕೋಚಿಂಗ್​ ತರಗತಿ ನಡೆಸುವ ಕೃಷ್ಣ, ಸದಾ ಆ ಸಂಬಂಧಿ ಫೋಟೋಸ್​ ಮತ್ತು ವಿಡಿಯೋ ತುಣುಕುಗಳನ್ನು ಆಗಾಗ ಜಾಲತಾಣಗಳಲ್ಲಿ ಶೇರ್​ ಮಾಡುತ್ತಿರುತ್ತಾರೆ. (ಏಜೆನ್ಸೀಸ್​)

krishna Shroff (2)
krishna Shroff (1)
krishna Shroff (9)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net