ಫಿಯೋನಾ ರಿಫೈನ್ಡ್ ಆಯಿಲ್​ಗೆ ರಶ್ಮಿಕಾ ಮಂದಣ್ಣ ರಾಯಭಾರಿ

Rashmika
Published on

ಬೆಂಗಳೂರು: ಖಾದ್ಯ ತೈಲ ವಿಭಾಗದಲ್ಲಿ ದೊಡ್ಡ ಹೆಸರು ಮಾಡಿರುವ ಬಂಜ್ ಇಂಡಿಯಾ ಸಂಸ್ಥೆಯು, ಮಾರುಕಟ್ಟೆಗೆ ಹೊಸ ರಿಫೈನ್ಡ್ ಆಯಿಲ್ ಬಿಡುಗಡೆ ಮಾಡಿದೆ. ಫಿಯೋನಾ ಹೆಸರಿನ ಈ ಸನ್​ಫ್ಲವರ್ ಆಯಿಲ್​ಗೆ, ರಶ್ಮಿಕಾ ಮಂದಣ್ಣ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ, ಈ ಸನ್​ಫ್ಲವರ್ ಆಯಿಲ್ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಿದೆ.

ಫಿಯೋನಾ ರಿಫೈನ್ಡ್ ಸನ್​ಫ್ಲವರ್ ಆಯಿಲ್, ವಿಟಮಿನ್ ಎ,ಡಿ,ಇ ಮತ್ತು ಕೆನಲ್ಲಿ ಸಂಪದ್ಭರಿತವಾಗಿರುವುದರ ಜತೆಗೆ ಹಲವು ವಿಶೇಷತೆಗಳಿಂದ ಕೂಡಿದೆ. ಬೇರೆ ಖಾದ್ಯದೆಣ್ಣೆಯಲ್ಲೂ ವಿಟಮಿನ್​ಗಳಿದ್ದರೂ, ಅಡುಗೆ ಮಾಡುವಾಗ ಸಾಕಷ್ಟು ಹಾಳಾಗುತ್ತವೆ. ಆದರೆ, ಫಿಯೋನಾದಲ್ಲಿರುವ ವಿಟೋಪ್ರೊಟೆಕ್ಟ್ ಫಾಮುಲದಿಂದಾಗಿ ವಿಟಮಿನ್​ಗಳು ಸುರಕ್ಷಿತವಾಗಿರುವುದಷ್ಟೇ ಅಲ್ಲ, ಆರೋಗ್ಯ ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಈ ಕುರಿತು ಮಾತನಾಡಿರುವ ರಶ್ಮಿಕಾ ಮಂದಣ್ಣ, ‘ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯಕರ ಆಹಾರದ ಕುರಿತು ಸಾಕಷ್ಟು ಜಾಗೃತಿ ಉಂಟಾಗಿದೆ. ಒಳ್ಳೆಯ ಅಡುಗೆ ಎಣ್ಣೆ ಆಯ್ಕೆ ಮಾಡುವುದು ಬಹಳ ಮುಖ್ಯವಾಗಿದ್ದು, ಫಿಯೋನಾ ಅಡುಗೆ ಎಣ್ಣೆಯಿಂದ ನಿಮ್ಮ ಕೆಲಸ ಸುಲಭವಾಗುತ್ತದೆ’ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಬಿ2ಸಿ ಸೇಲ್ಸ್​ನ ಉಪಾಧ್ಯಕ್ಷ ಸಂಜೀವ್ ಗಿರಿ, ಎವಿಪಿ ಮಾರ್ಕೆಟಿಂಗ್ ಮಿಲಿಂದ್ ಆಚಾರ್ಯ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net