ಚಿಕನ್​ ತಿಂದು ತಗ್ಲಾಕ್ಕೊಂಡ ರಶ್ಮಿಕಾ! ಹಳೆಯ ವಿಡಿಯೋ ಕೆದಕಿ ಕಿರಿಕ್​ ಬ್ಯೂಟಿಗೆ ನೆಟ್ಟಿಗರ ತರಾಟೆ

Rashmika Mandanna
Published on

ಹೈದರಾಬಾದ್​: ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಕೆಲವೇ ವರ್ಷಗಳಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿರುವ ರಶ್ಮಿಕಾ ಮಂದಣ್ಣಾಗೆ ವಿವಾದಗಳು ಹೊಸದೇನಲ್ಲ. ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕುವಾ ರಶ್ಮಿಕಾ, ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಬಾರಿ ರಶ್ಮಿಕಾರನ್ನು ವಿವಾದಕ್ಕೆ ದೂಡಿರುವುದು ಮಾತ್ರ ಚಿಕನ್.

ಚಿಕನ್​​ ತಿನ್ನುತ್ತಿರುವ ದೃಶ್ಯ

ಹೌದು, ರಶ್ಮಿಕಾ ಅವರು ಚಿಕನ್​ ತಿಂದು ವಿವಾದದ ಸುಳಿಗೆ ಮತ್ತೊಮ್ಮೆ ಬಿದ್ದಿದ್ದಾರೆ. ನಿಮಗೆ ಗೊತ್ತಿರುವ ಹಾಗೇ ರಶ್ಮಿಕಾ ಅವರು ಅನೇಕ ಬ್ರ್ಯಾಂಡ್​ಗಳಿಗೆ ಜಾಹೀರಾತು ನೀಡುತ್ತಾರೆ.​ ಇತ್ತೀಚೆಗೆ ಜಪಾನೀಸ್​ ಫ್ಯಾಶನ್​ ಬ್ರ್ಯಾಂಡ್​ ಒಂದಕ್ಕೆ ರಾಯಭಾರಿಯಾಗಿದ್ದಾರೆ. ಅಲ್ಲದೆ, ಫುಡ್​ ಐಟಂ ಒಂದರ ಜಾಹೀರಾತುವಿನಲ್ಲಿ ನಟಿಸಿದ್ದಾರೆ. ಪ್ರಖ್ಯಾತ ಬರ್ಗರ್​ ಬ್ರ್ಯಾಂಡ್​ ಜಾಹೀರಾತುವಿನಲ್ಲಿ ರುಚಿಕರವಾದ ಮಸಾಲೆಭರಿತ ಚಿಕನ್​​ ತಿನ್ನುತ್ತಿರುವ ದೃಶ್ಯವಿದೆ. ಇದೇ ದೃಶ್ಯ ಇದೀಗ ರಶ್ಮಿಕಾರನ್ನು ಟ್ರೋಲ್​ಗೆ ಗುರಿಯಾಗಿಸಿದೆ.

ಸಸ್ಯಹಾರಿ ಎಂದಿದ್ದರು

ಜಾಹೀರಾತು ವಿಡಿಯೋವನ್ನು ರಶ್ಮಿಕಾ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆ ವಿಡಿಯೋ ವೈರಲ್​ ಸಹ ಆಗಿದೆ. ಆದರೆ, ರಶ್ಮಿಕಾ ಅವರು ಈ ಹಿಂದಿನ ಅನೇಕ ಸಂದರ್ಶನಗಳಲ್ಲಿ ತಾವೊಬ್ಬ ಸಸ್ಯಹಾರಿ ಎಂದು ಹೇಳಿಕೊಂಡಿದ್ದಾರೆ. ಇದೀಗ ನೆಟ್ಟಿಗರು ಹಳೆಯ ವಿಡಿಯೋವನ್ನು ಎಳೆದುತಂದು ರಶ್ಮಿಕಾರನ್ನು ಟ್ರೋಲ್​ ಮಾಡುತ್ತಿದ್ದಾರೆ.

ಜನರಿಗೆ ಮೋಸ ಮಾಡಬೇಡಿ

ನೀವು ಜನರನ್ನು ಮೂರ್ಖರನ್ನಾಗಿಸಬೇಡಿ. ಈ ಹಿಂದೆ ನಾನು ಸಸ್ಯಹಾರಿ ಎಂದು ಹೇಳಿ, ಈಗ ಮಾಂಸವನ್ನು ಸೇವಿಸುತ್ತಿದ್ದೀರಾ, ನೀವು ಜನರಿಗೆ ಮೋಸ ಮಾಡಬೇಡಿ ಎಂದು ರಶ್ಮಿಕಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ರಶ್ಮಿಕಾ ಅವರ ಸಿನಿಮಾ ವಿಚಾರಕ್ಕೆ ಬರುವುದಾರೆ, ಬಾಲಿವುಡ್​ನಲ್ಲಿ ರಣಬೀರ್ ಕಪೂರ್ ಜತೆ ಅನಿಮಲ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್ ಜತೆ ಪುಷ್ಪ 2, ನಿತಿನ್ ಜೊತೆ ಒಂದು ಸಿನಿಮಾ ಮತ್ತು ರೇನ್ ಬೋ ಎಂಬ ಲೇಡಿ ಓರಿಯೆಂಟೆಡ್ ಸಿನಿಮಾ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳಾಗಿ ತಯಾರಾಗುತ್ತಿರುವ ಅನಿಮಲ್ ಮತ್ತು ಪುಷ್ಪ 2 ಸಿನಿಮಾ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಎರಡು ಚಿತ್ರಗಳ ಮೂಲಕ ರಶ್ಮಿಕಾ ಎಷ್ಟು ಸ್ಟಾರ್ ಡಮ್ ಗಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net