ಸಮಂತಾ ಸವಾಲು ಸ್ವೀಕರಿಸಿದ ರಶ್ಮಿಕಾ ... ಏನದು ಚಾಲೆಂಜ್​?

Rashmika Mandanna - Final
Published on

ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರೆಲ್ಲಾ, ಒಬ್ಬರು ಇನ್ನೊಬ್ಬರಿಗೆ ಸವಾಲು ಹಾಕುವುದರಲ್ಲೇ ಕಳೆದ ಮೂರು ತಿಂಗಳಿನಿಂದ ಬಿಜಿಯಾಗಿದ್ದಾರೆ. ಸದ್ಯಕ್ಕೆ ಅಲ್ಲಿ ಬಹಳ ಜನಪ್ರಿಯವಾಗಿರುವುದು ‘ಗ್ರೀನ್ ಇಂಡಿಯಾ’ ಚಾಲೆಂಜ್.

ಈ ಚಾಲೆಂಜ್‌ನಲ್ಲಿ ಒಬ್ಬ ಸೆಲೆಬ್ರಿಟಿ ಮನೆಯ ಹಿಂದೆ ಮೂರು ಗಿಡಗಳನ್ನು ನೆಡುವುದರ ಜತೆಗೆ, ಮೂರು ಜನರಿಗೆ ಅದೇ ರೀತಿ ಮಾಡುವುದಕ್ಕೆ ನಾಮಿನೇಟ್ ಮಾಡಬೇಕು. ಆ ಮೂರು ಜನ, ಮೂರ್ಮೂರಂತೆ ಒಂಬತ್ತು ಜನರನ್ನು ನಾಮಿನೇಟ್ ಮಾಡಬೇಕು. ಕಳೆದ ವಾರ ತಮ್ಮ ಹಿತ್ತಿಲಲ್ಲಿ ಗಿಡಗಳನ್ನು ನೆಟ್ಟ ಸಮಂತಾ, ರಶ್ಮಿಕಾ ಮಂದಣ್ಣ ಅವರನ್ನು ನಾಮನಿರ್ದೇಶನ ಮಾಡಿದ್ದರು.

ಸಮಂತಾ ಹಾಕಿದ್ದ ಸವಾಲನ್ನು ಸ್ವೀಕರಿಸಿರುವ ರಶ್ಮಿಕಾ ಮಂದಣ್ಣ, ಮನೆಯ ಹಿಂದೆ ತೋಟದಲ್ಲಿ ಗಿಡ ನೆಟ್ಟಿದ್ದಾರೆ. ಅಷ್ಟೇ ಅಲ್ಲ, ಗಿಡ ನೆಡುತ್ತಿರುವ ಫೋಟೋವೊಂದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಇಂಥದ್ದೊಂದು ಕೆಲಸಕ್ಕೆ ಹಚ್ಚಿದ ಸಮಂತಾ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ರಾಶಿ ಖನ್ನಾ, ಕಲ್ಯಾಣಿ ಪ್ರಿಯದರ್ಶನ್ ಮತ್ತು ಆಶಿಕಾ ರಂಗನಾಥ್ ಅವರನ್ನು ನಾಮನಿರ್ದೇಶನ ಮಾಡುವುದರ ಜತೆಗೆ, ತಮ್ಮ ಅಭಿಮಾನಿಗಳಿಗೂ ಸವಾಲು ಸ್ವೀಕರಿಸಿ ಗಿಡ ನೆಡುವಂತೆ ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net