ವಯಸ್ಸಾದ ಅಪ್ಪನನ್ನು ಹೊರಗೆ ಕರೆದುಕೊಂಡು ಹೋಗಲು ಭಯ ಎಂದು ತಾವೇ ಶೇವಿಂಗ್​ ಮಾಡಿದ ಹಾಸ್ಯನಟ

Shivaraj K pete
Published on

ಕೊವಿಡ್​-19 ಇರುವುದರಿಂದ ಹೊರಗೆ ಓಡಾಡುವುದೇ ಅಪಾಯ ಎಂಬಂತಾಗಿದೆ. ಅದರಲ್ಲೂ ಹಿರಿಯರು, ಮಕ್ಕಳು ಆದಷ್ಟು ಮನೆಯ ಹೊರಗೆ ಬರಬೇಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯರು ಈ ಹಿಂದಿನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಕೊವಿಡ್​ನಿಂದಾಗಿ ಕಟಿಂಗ್​ ಶಾಪ್​​ಗಳಿಗೆ ಹೋಗುವುದು ದೊಡ್ಡ ಕಷ್ಟವಾಗಿದೆ. ಹಾಗಾಗಿ, ಹಾಸ್ಯನಟ ಶಿವರಾಜ್​ ಕೆ.ಆರ್​.ಪೇಟೆ ಅವರು ತನ್ನ ತಂದೆಗೆ ಮನೆಯಲ್ಲೇ ಶೇವಿಂಗ್​, ಕಟಿಂಗ್​ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅರ್ಧ ಲಕ್ಷ ದಾಟಿದ ಸೋಂಕಿತರ ಸಂಖ್ಯೆ; 4,169 ಹೊಸ ಪ್ರಕರಣಗಳು; 104 ಜನರ ಸಾವು

ಫೇಸ್​​ಬುಕ್​ನಲ್ಲಿ ತಾವು ತಮ್ಮ ತಂದೆಗೆ ಶೇವಿಂಗ್​ ಮಾಡುತ್ತಿರುವ ಫೋಟೋ ಅಪ್ಲೋಡ್​ ಮಾಡಿದ ಶಿವರಾಜ್​ ಅವರು, ನಾನು ಚಿಕ್ಕವನಿದ್ದಾಗ ನನ್ನ ಅಪ್ಪ ಹೇರ್ ಕಟಿಂಗ್​ ಮಾಡಿಸೋಕೆ ಅಂತ ಶಾಪ್​ಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗ ನನಗೆ ಅವರನ್ನು ಶಾಪ್​ಗೆ ಕರೆದುಕೊಂಡು ಹೋಗಲು ಭಯ. ಹಾಗಾಗಿ ನಾನೇ ಮಾಡಿದೆ ಎಂದು ಪೋಸ್ಟ್​ ಹಾಕಿದ್ದಾರೆ.

ಅವರ ಈ ಫೋಟೊವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ತುಂಬ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಕಾಮೆಂಟ್​ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net