

ಪೂಜಾ ಹೆಗ್ಡೆ, ಲಾಕ್ಡೌನ್ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಸಕ್ರಿಯವಾಗಿಯೇ ಇದ್ದರು. ಇದರಿಂದ ಪೂಜಾ ಹೆಗ್ಡೆ ಅವರನ್ನು ಹಿಂಬಾಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಈ ಸಂಖ್ಯೆ ಇದೀಗ 11 ಮಿಲಿಯನ್ ಆಗಿದೆ. ತಮ್ಮ ಇನ್ಸ್ಟಾಗ್ರಾಂ ಅಕೌಂಟ್ಗೆ 11 ಲಕ್ಷ ಹಿಂಬಾಲಕರಿರುವ ಖುಷಿಯನ್ನು ಹಂಚಿಕೊಳ್ಳುವುದಕ್ಕೆ ಪೂಜಾ ಹೆಗ್ಡೆ ಒಂದು ವಿಶೇಷ ಫೋಟೋ ಹಾಕಿದ್ದಾರೆ. ಇಷ್ಟಕ್ಕೂ ಏನದು ಸ್ಪೆಷಲ್ ಫೋಟೋ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.
ಎರಡೂ ಕಾಲುಗಳನ್ನು ಮೇಲಕ್ಕೆತ್ತಿ, ಅದರ ಪಕ್ಕ ಫಾಲೋವರ್ಸ್ ಅಂದಷ್ಟೇ ಬರೆದುಕೊಂಡಿದ್ದಾರೆ. ಈ ಮೂಲಕ ತಮಗೆ 11 ಲಕ್ಷ ಹಿಂಬಾಲಕರಿದ್ದಾರೆ ಎಂಬ ವಿಷಯವನ್ನು ಪರೋಕ್ಷವಾಗಿ ಹೇಳುವ ಪ್ರಯತ್ನವನ್ನು ಅವರು ಈ ಫೋಟೋದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.
ಎಲ್ಲಾ ಸರಿ, ಪೂಜಾ ಕಾಲುಗಳನ್ನು ತೋರಿಸಿದ್ದು ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಅದಕ್ಕೆ ಕಾರಣ, ಇತ್ತೀಚಿನ ದಿನಗಳಲ್ಲಿ ಟಾಲಿವುಡ್ನಲ್ಲಿ ಅವರ ಕಾಲುಗಳು ಬಹಳ ಫೇಮಸ್ ಆಗಿರುವುದು. 'ಅಲಾ ವೈಕುಂಠಪುರಂಲೋ' ಚಿತ್ರದಲ್ಲಿ ಪೂಜಾ ತಮ್ಮ ಉದ್ದ ಕಾಲುಗಳನ್ನು ಹೆಚ್ಚುಹೆಚ್ಚು ಪ್ರದಶಿರ್ಸುವ ಮೂಲಕ ಇನ್ನಷ್ಟು ಜನಪ್ರಿಯರಾದರು. ಹಾಗಾಗಿ ಅದನ್ನು ಈ ಫೋಟೋದ ಮೂಲಕ ಸೂಚ್ಯವಾಗಿ ಹೇಳುವುದಕ್ಕೆ ಪ್ರಯತ್ನ ಮಾಡಿದ್ದಾರಂತೆ.
ಈ ಕುರಿತು ಮಾತನಾಡಿರುವ ಅವರು, 'ಈ ವರ್ಷದ ಆರಂಭದಿಂದಲೂ ನನ್ನ ಕಾಲುಗಳು ಬಹಳ ಸುದ್ದಿಯಲ್ಲಿವೆ. ಅದೇ ಕಾರಣಕ್ಕೆ, ಈ ತರಹ ಮಾಡಿದೆ' ಎನ್ನುವುದರ ಜತೆಗೆ, ತಮ್ಮ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.