

ಬಾಲಿವುಡ್ನ ಟಾಪ್ ಸ್ಟಾರ್ಗಳ ಪೈಕಿ ರಣವೀರ್ ಸಿಂಗ್ ಸಹ ಒಬ್ಬರು. ಕೆಲವು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದ ರಣವೀರ್, ಈಗ ಬಾಲಿವುಡ್ನ ಬೇಡಿಕೆಯ ನಟರಲ್ಲೊಬ್ಬರು ಎಂದರೆ ತಪ್ಪಿಲ್ಲ. ಹಾಗೆ ಅವರು ಟಾಪ್ ಸ್ಟಾರ್ ಆಗುವುದಕ್ಕೆ ಕಾರಣ ಸುಶಾಂತ್ ಸಿಂಗ್ ರಜಪೂತ್ ಎಂದು ಹೇಳಲಾಗಿದೆ.
ಹೌದು, ಸುಶಾಂತ್ ಏನಾದರೂ ಆ ಚಿತ್ರಗಳನ್ನು ಒಪ್ಪಿಕೊಂಡು ಮಾಡಿದ್ದರೆ, ಇವತ್ತು ರಣವೀರ್ ಸ್ಥಾನದಲ್ಲಿರಬೇಕಿತ್ತು. ಆದರೆ, ಆ ಚಿತ್ರಗಳನ್ನು ಬಿಟ್ಟ ಕಾರಣ, ಸುಶಾಂತ್ ಕೊನೆಯವರೆಗೂ ಸಾಕಷ್ಟು ಹೋರಾಟಗಳನ್ನು ಮಾಡಬೇಕಾಯಿತು ಮತ್ತು ಇನ್ನು ಮುಂದೆ ಹೋರಾಟ ಮಾಡಲಿಕ್ಕಾಗದೆ ಆತ್ಮಹತ್ಯೆಗೆ ಶರಣಾಯಿತು.
ಇಷ್ಟಕ್ಕೂ ಸುಶಾಂತ್ ಕೈಬಿಟ್ಟ ಆ ಚಿತ್ರಗಳ್ಯಾವುವು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಅದೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಚಿತ್ರಗಳು. ಈ ಮೂರೂ ಚಿತ್ರಗಳಿಗೆ ಬನ್ಸಾಲಿ ಅವರ ಮೊದಲ ಆಯ್ಕೆ ಸುಶಾಂತ್ ಆಗಿದ್ದರಂತೆ. ಕಾರಣಾಂತರಗಳಿಂದ ಆ ಚಿತ್ರಗಳಲ್ಲಿ ಸುಶಾಂತ್ ನಟಿಸದಿದ್ದರಿಂದ, ಆ ಜಾಗಕ್ಕೆ ರಣವೀರ್ ಅವರನ್ನು ಕರೆತರಬೇಕಾಯಿತಂತೆ. ಈ ಮೂರೂ ಚಿತ್ರಗಳನ್ನು ಅದ್ಭುತವಾಗಿ ಬಳಸಿಕೊಂಡ ರಣವೀರ್, ಇಂದು ಬಾಲಿವುಡ್ನ ಬೇಡಿಕೆಯ ನಟರಾಗಿದ್ದಾರೆ.
ಈ ಕುರಿತು ಬರೆದಿರುವ ಬಾಲಿವುಡ್ನ ಹಿರಿಯ ಸಿನಿಮಾ ಪತ್ರಕರ್ತ ಸುಭಾಷ್ ಜಾ, ಬನ್ಸಾಲಿ ಅವರ ಮೂರು ಚಿತ್ರಗಳನ್ನು ನಿರಾಕರಿಸಿದ ಏಕೈಕ ನಟರೆಂದರೆ ಅದು ಸುಶಾಂತ್. ಬನ್ಸಾಲಿ ಪ್ರತಿ ಬಾರಿ ಸುಶಾಂತ್ ಬಳಿ ಹೋದಾಗಲೂ, ಕಾರಣಾಂತರಗಳಿಂದ ಸುಶಾಂತ್ ಆ ಚಿತ್ರಗಳನ್ನು ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಹಾಗಾಗಿ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಚಿತ್ರಗಳಲ್ಲಿ ರಣವೀರ್ ನಟಿಸುವಂತಾಯಿತು ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ರಣವೀರ್ ಸಿಂಗ್ಗೆ ಸಿಕ್ಕಿರುವ ಯಶಸ್ಸಿನ ಅರ್ಧ ಪಾಲಿಗೆ ಕಾರಣ ಸುಶಾಂತ್ ಎಂದು ಹೇಳಿರುವ ಅವರು. ಬಹುಶಃ ಸುಶಾಂತ್ ಆ ಚಿತ್ರಗಳನ್ನು ಒಪ್ಪಿಬಿಟ್ಟಿದ್ದರೆ, ರಣವೀರ್ಗೆ ಆ ಚಿತ್ರಗಳು ಸಿಗುತ್ತಿರಲಿಲ್ಲ. ಹಾಗಾಗಿ ರಣವೀರ್ ಯಶಸ್ಸಿಗೆ ಕಾರಣ ಸುಶಾಂತ್ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.