ಪಾಪ.. ದೀಪಿಕಾ ಆಸೆಯನ್ನು ಪತಿ ರಣವೀರ್​ ಸಿಂಗ್​ ಇನ್ನೂ ಈಡೇರಿಸಿಲ್ಲವಂತೆ!

love-story-deepika-ranveer
Published on

ಬಾಲಿವುಡ್​ನ ಸ್ಟಾರ್ ದಂಪತಿ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ, ಲಾಕ್​ಡೌನ್​ನಲ್ಲಿ ಸದಾ ಒಂದಿಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಇದೀಗ ಸ್ವತಃ ದೀಪಿಕಾ ಪತಿ ರಣವೀರ್​ ಸಿಂಗ್​ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಆ ಆರೋಪ ಏನೆಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ ದೀಪಿಕಾ.

ಹೌದು, ಮದುವೆಗೂ ಮುನ್ನ ಹಲವು ವರ್ಷ ಡೇಟಿಂಗ್​ನಲ್ಲಿದ್ದ ಈ ಜೋಡಿ, 2018ರ ನವೆಂಬರ್​ನಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಬಾರಿ ರುಚಿಯಾದ ಅಡುಗೆ ಮಾಡಿಕೊಟ್ಟಿಲ್ಲವಂತೆ ರಣವೀರ್​. ಮದುವೆಗೂ ಮುನ್ನ, ಅಂದರೆ ಡೇಟಿಂಗ್​ ದಿನಗಳಲ್ಲಿ ಅಡುಗೆ ಮಾಡಿಕೊಡುವುದಾಗಿ ರಣವೀರ್​ ದೀಪಿಕಾಗೆ ಪ್ರಾಮಿಸ್​ ನೀಡಿದ್ದರು. ಅಂದಿನ ಪ್ರಾಮಿಸ್​ ಇನ್ನೂ ಈಡೇರಿಲ್ಲವಂತೆ.

ಇತ್ತೀಚೆಗೆ ಇಂಡಿಯನ್​ ಫುಟ್​ಬಾಲ್​ ಟೀಮ್​ನ ಕ್ಯಾಪ್ಟನ್​ ಸುನೀಲ್​ ಚೆಟ್ರಿ ಮತ್ತು ರಣವೀರ್​ ಸಿಂಗ್​ ಇನ್ಸ್ಟಾಗ್ರಾಮ್​ ಲೈವ್​ನಲ್ಲಿ ಒಟ್ಟಾಗಿ ಲಾಕ್​ಡೌನ್​ ಸೇರಿ ಒಂದಷ್ಟು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಆಗ ಹಳೇ ದಿನಗಳನ್ನು ನೆನೆದ ರಣವೀರ್​, ‘ದೀಪಿಕಾರನ್ನು ಇಂಪ್ರೆಸ್​ ಮಾಡಲು, ನನಗೆ ಬಟರ್​ ಚಿಕನ್​ ಮಾಡಲು ಬರುತ್ತದೆ ಎಂದು ಸುಳ್ಳು ಹೇಳಿದ್ದೆ. ಅಷ್ಟೇ ಅಲ್ಲ, ನಾನು ಅಮೆರಿಕದಲ್ಲಿನ ಯೂನಿವರ್ಸಿಟಿಯಲ್ಲಿದ್ದಾಗ ನಾನು ಮಾಡಿದ ಬಟರ್ ಚಿಕನ್​ ತಿನ್ನಲು ಪಾಕಿಸ್ತಾನ್​, ಬಾಂಗ್ಲಾದೇಶ್​, ಇಂಡಿಯಾದವರು ಕ್ಯೂನಲ್ಲಿ ನಿಲ್ಲುತ್ತಿದ್ದರು’ ಎಂದು ದೀಪಿಕಾಗೆ ಡೇಟಿಂಗ್​ ಸಮಯದಲ್ಲಿ ಹೇಳಿದ್ದನ್ನೂ ಲೈವ್​ ಚಾಟ್​ನಲ್ಲಿ ರಣವೀರ್​ ಮೆಲುಕು ಹಾಕಿದ್ದಾರೆ. ಆದರೆ, ಇದೂವರೆಗೂ ಅಂದು ಹೇಳಿದ್ದ ಬಟರ್​ ಚಿಕನ್​ ಅನ್ನು ದೀಪಿಕಾಗೆ ಮಾಡಿಕೊಟ್ಟಿಲ್ಲವಂತೆ. ತನಗೆ ಬ್ರೆಡ್​ ಆಮ್ಲಿಟ್ ಅಷ್ಟೇ ಬರುವುದು ಎಂದು ಕಿಚಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net